ಸೋಮವಾರಪೇಟೆ, ಫೆ. ೨೮: ಇಲ್ಲಿನ ಹನಫಿ ಜಾಮಿಯಾ ಮಸೀದಿಯ ಹಝ್ರತ್ ಮಸ್ತಾನ್ ಮಲಂಗ್ ಷಾ ವಲಿ ಉರೂಸ್ ಮಾ. ೧ ರಂದು ರೇಂಜರ್ ಬ್ಲಾಕ್ ಜಾಮಿಯಾ ಮಸೀದಿಯಲ್ಲಿ ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಬಷೀರ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೬.೩೦ಕ್ಕೆ ಮಸೀದಿಯಲ್ಲಿ ಗಂಧ ಮಹೋತ್ಸವ ನಡೆದು, ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ದಫ್ ತಂಡದೊAದಿಗೆ ಫಕೀರರ ಝರಬ್ ಮೆರವಣಿಗೆ ನಡೆಯಲಿದೆ ಎಂದರು.
ಸAಜೆ ೭.೩೦ಕ್ಕೆ ನಡೆಯುವ ಧಾರ್ಮಿಕ ಪ್ರವಚನವನ್ನು ಸೋಮವಾರಪೇಟೆ ಹನಫಿ ಜಾಮಿಯಾ ಮಸೀದಿಯ ಖತೀಬರಾದ ಆಝಂ ರಝಾ ನಡೆಸಿಕೊ ಡಲಿದ್ದಾರೆ. ಕಾಜೂರ್ ಹುಲ್ಲೇಹಳ್ಳಿ ಹಝ್ರತ್‌ನ ಷಂಶುದ್ದೀನ್ ರ‍್ರಿ, ಮೈಸೂ ರಿನ ಯಾಸೀರ್ ಅಖ್ತಾರಿ ಅವರುಗಳು ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಶಾಸಕರಾದ ಡಾ. ಮಂಥರ್ ಗೌಡ ಭಾಗವಹಿಸಲಿದ್ದಾರೆ. ಕಾರ್ಯ ಕ್ರಮದ ಬಳಿಕ ಮಸೀದಿಯಲ್ಲಿ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ರಹಿಂ ಬೇಗ್, ಪ್ರಧಾನ ಕಾರ್ಯ ದರ್ಶಿ ಮಹಮ್ಮದ್ ಶಫಿ, ಖಜಾಂಚಿ ಇನಾಯತ್ ಖಾನ್ ಉಪಸ್ಥಿತರಿದ್ದರು.