ಸುಂಟಿಕೊಪ್ಪ, ಫೆ. ೨೮: ಸಮೀಪದ ಕಂಬಿ ಬಾಣೆ ಗ್ರಾಮ ಪಂಚಾ ಯಿತಿಯ ಉಪ್ಪುತೋಡು ಸಮೀಪದ ಡಾ. ಶಶಿಕಾಂತ್ ರೈ ಅವರ ತೋಟಕ್ಕೆ ರಾತ್ರಿ ವೇಳೆ ಆಹಾರ ಅರಸಿ ಆಗಮಿಸಿದ್ದ ಕಾಡಾನೆಗಳು ಮನೆ ಸಮೀಪವಿದ್ದ ಹೂವಿನ ಕುಂಡಗಳನ್ನು ದ್ವಂಸ ಮಾಡಿ ತೋಟದಲ್ಲಿದ್ದ ಕಾಪಿ,ü ಬಾಳೆ, ಸಪೋಟ ಗಿಡಗಳನ್ನು ನಾಶಮಾಡಿದೆ. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಆನೆಗಳು ಅಡ್ಡಾಡುತ್ತಿದ್ದು, ಜೀವಭಯದಿಂದ ಕೆಲಸ ಮಾಡುವಂತಾಗಿದೆ ಎಂದು ಕಾರ್ಮಿಕÀರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ಕೃಷಿ ಫಲಸನ್ನು ದ್ವಂಸಗೊಳಿಸುತ್ತಿದ್ದು, ಸಾವಿರಾರು ರೂ. ನಷ್ಟ ಉಂಟಾಗಿರುವ ಬಗ್ಗೆ ಸ್ಥಳೀಯ ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗೆ ಅಟ್ಟುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.