ಮಡಿಕೇರಿ, ಫೆ. ೨೭: ನಿವೃತ್ತ ವಲಯ ಅರಣ್ಯಾಧಿಕಾರಿ ಹಾಗೂ ಪರಿಸರವಾದಿ ಕೆ.ಎಂ.ಚಿಣ್ಣಪ್ಪ ಅಂತ್ಯಕ್ರಿಯೆ ನಾಗರಹೊಳೆ ವ್ಯಾಪ್ತಿಯ ಕುಮಟೂರು ಗ್ರಾಮದಲ್ಲಿ ನೆರವೇರಿತು.
ಅರಣ್ಯ ಇಲಾಖೆಯ ಡಿ.ಸಿ.ಎಫ್. ಭಾಸ್ಕರ್, ಡಿಸಿಎಫ್ ಶರಣ ಬಸಪ್ಪ, ಸಿಎಎಫ್ ಹರ್ಷ ನರಗುಂದ ಸೇರಿದಂತೆ ಅನೇಕ ಅಧಿಕಾರಿಗಳು, ಸಿಬ್ಬಂದಿಗಳು, ಈ ಹಿಂದೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಭಾಸ್ಕರ್ ರಾವ್ , ಪರಿಸರ ಸಂಘಟನೆಗಳ ಪ್ರಮುಖರಾದ ಡಾ. ಉಲ್ಲಾಸ್ ಕಾರಂತ್, ಡಾ. ಸಾಂಭಕುಮಾರ್, ಸಾಕ್ಷ್ಯ ಚಿತ್ರ ನಿರ್ದೇಶಕ ಶೇಖರ್ ದತ್ತಾತ್ರಿ, ಪ್ರವೀಣ್ ಭಾರ್ಗವ್, ಕೃಪಾಕರ ಸೇನಾನಿ, ವೈಲ್ಡ್ ಲೈಫ್ ಫಸ್ಟ್ ನ ತಮ್ಮು ಪೂವಯ್ಯ, ಪಿ.ಎಂ.ಮುತ್ತಣ್ಣ, ಸತೀಶ್ ಅಪ್ಪಚ್ಚು, ಪ್ರಮೋದ್ ಸೋಮಯ್ಯ, ಕೊಟ್ರಂಗಡ ಸುಬ್ರಮಣಿ, ಕಟ್ಟೇರ ಜಾಜಿ, ಪುಟ್ಟು ಚಿಟ್ಟಿಯಪ್ಪ, ಟಿ.ಎಲ್. ಶ್ರೀನಿವಾಸ್ ಮತ್ತಿತರರು ಅಂತಿಮ ಸಲ್ಲಿಸಿದರು.