ಕುಶಾಲನಗರ, ಫೆ. ೨೬: ಜೀವನದಿ ಕಾವೇರಿಯನ್ನು ಕಲುಷಿತಗೊಳ್ಳದಂತೆ ಉಳಿಸಿ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಶಾಲನಗರ ಬೈಚನಹಳ್ಳಿ ಶ್ರೀ ಆದಿಶಕ್ತಿ ಅಂತರ್ಗಟ್ಟೆ ಅಮ್ಮ ದೇವಾಲಯದ ಆಡಳಿತ ಮಂಡಳಿ ಪ್ರಮುಖ ಬಿ.ಎಸ್. ಪರಮೇಶ್ ಹೇಳಿದರು.

ಅವರು ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಬೈಚನಹಳ್ಳಿ ಶ್ರೀ ಆದಿಶಕ್ತಿ ಅಂತರ್ಗಟ್ಟೆ ಅಮ್ಮ ದೇವಾಲಯ ಸೇವಾ ಸಮಿತಿ ಸಹಯೋಗದೊಂದಿಗೆ ಹುಣ್ಣಿಮೆ ಅಂಗವಾಗಿ ನಡೆದ ೧೫೬ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನದಿ ತಟದಲ್ಲಿ ಅವೈಜ್ಞಾನಿಕ ಬೆಳವಣಿಗೆಯೊಂದಿಗೆ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳು ಸೇರಿದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗಿದೆ. ಈ ಸಂಬAಧ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಭರತ ಹುಣ್ಣಿಮೆ ಅಂಗವಾಗಿ ನದಿಗೆ ವಿಶೇಷ ಆರತಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಮಾತನಾಡಿ, ನದಿಯನ್ನು ಪೂಜಿಸುವ ಮೂಲಕ ಸಂರಕ್ಷಣೆ ಸಾಧ್ಯ, ನಾವು ನದಿಯನ್ನು ರಕ್ಷಿಸಿದರೆ ಅದು ನಮ್ಮನ್ನು ತಾಯಿಯಂತೆ ರಕ್ಷಿಸುತ್ತದೆ ಎಂದು ನದಿಯ ಮಹತ್ವದ ಬಗ್ಗೆ ತಿಳಿಸಿದರು.

ಈ ಸಂದರ್ಭ ಆದಿಶಕ್ತಿ ಅಂತರ್ಗಟ್ಟೆ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿ. ಗಿರೀಶ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಬಿ.ಎಂ. ಜಗದೀಶ್, ಬಿ.ಡಿ. ಜಗದೀಶ್, ಬಿ.ಎಸ್. ರವಿಕುಮಾರ್, ಮತ್ತಿತರರು ಆಗಮಿಸಿ ನದಿಗೆ ಆರತಿ ಬೆಳಗಿದರು.

ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಮಂಡೆಪAಡ ಬೋಸ್ ಮೊಣ್ಣಪ್ಪ, ಡಿ.ಆರ್. ಸೋಮಶೇಖರ್, ವೈಶಾಕ್, ಪ್ರವೀಣ್ ಮತ್ತು ಬಳಗದ ಸದಸ್ಯರು ಇದ್ದರು.