ವೀರಾಜಪೇಟೆ, ಫೆ. ೨೬: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಜ್ಞಾನ ಗಂಗಾ ಭವನ ವತಿಯಿಂದ ೮೮ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವದ ಪ್ರಯುಕ್ತ ತಾಲೂಕು ಮೈದಾನದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಮತ್ತು ಅಧ್ಯಾತ್ಮಿಕ ಚಿತ್ರಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಇಂದು ಎಲ್ಲ ಕಡೆ ಹಿಂಸೆ, ಕ್ರೋಧ, ಆಕ್ರೋಶ, ಅಸೂಯೆಗಳು ಕಂಡುಬರುತ್ತಿವೆ. ತಾನು ಬದುಕುವುದರ ಜೊತೆಗೆ ಎಲ್ಲರನ್ನೂ ಪ್ರೀತಿಸುವಂತಾಗಬೇಕು. ದ್ವೇಷವನ್ನು ತೊಡೆದು ಹಾಕಬೇಕು ಎಂದರು.
ಸೇವಾದಾರಿ ಮೈಸೂರಿನ ಪ್ರಾಣೇಶ್ ಮಾತನಾಡಿ, ನಮ್ಮೊಳಗಿನ ಪರಿವರ್ತನೆ ಪ್ರಸ್ತುತ ಸಮಾಜದಲ್ಲಿ ಅಗತ್ಯ ಎಂದರು.
ಹಾಕಿ ಕೋಚ್, ನಿವೃತ್ತ ಸೈನಿಕ ಪ್ರಿನ್ಸ್ ಗಣಪತಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಕಲಿಯುವಂತದ್ದು ಬಹಳಷ್ಟಿದೆ ಎಂದರು.
ಮಡಿಕೇರಿ ಶಾಖೆಯ ಧನಲಕ್ಷಿö್ಮ ಮಾತನಾಡಿ, ಸಂಕಷ್ಟಗಳನ್ನು ಮಂಜಿನAತೆ ಕರಗಿಸುವ ಶಕ್ತಿ ಅಧ್ಯಾತ್ಮಕ್ಕೆ ಇದೆ ಎಂದರು.
ಜ್ಞಾನ ಗಂಗಾ ಭವನದ ಮುಖ್ಯಸ್ಥರಾದ ಕೋಮಲ ಮಾತನಾಡಿ, ಜ್ಯೋತಿರ್ಲಿಂಗಗಳ ಪುಣ್ಯ ದರ್ಶನಕ್ಕಾಗಿ ಬೆಳಿಗ್ಗೆ ೭ ಗಂಟೆಯಿAದ ರಾತ್ರಿ ೮ ಗಂಟೆ ವರೆಗೆ ಮಹಿಳೆಯರಿಗೆ, ಮಕ್ಕಳಿಗೆ, ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು. ಮೈಸೂರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಲಕ್ಷಿö್ಮÃಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ ಎಂದರು.ಇದೇ ಸಂದರ್ಭ ಭರತನಾಟ್ಯ ಪ್ರದರ್ಶನ ನಡೆಯಿತು. ಪ್ರಸಾದ ವಿತರಣೆ ನೆರವೇರಿತು. ಮಾರ್ಚ್ ೧ರವರೆಗೆ ಪುಸ್ತಕ ಪ್ರದರ್ಶನ, ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ವಿದ್ಯಾರಣ್ಯಪುರಂ ಶಾಖೆಯ ಸಂಚಾಲಕಿ ಯತ್ನ, ವಿವಿಧ ಸೇವಾ ಕೇಂದ್ರದ ಸದಸ್ಯರುಗಳು, ಸೇರಿದಂತೆ ಇತರರು ಹಾಜರಿದ್ದರು.