ಮಡಿಕೇರಿ, ಫೆ. ೨೫: ನಗರದ ತನಲ್ ಆಶ್ರಮಕ್ಕೆ ರೋಟರಿ ಮಡಿಕೇರಿ ವುಡ್ಸ್ನಿಂದ ಗಾಲಿ ಕುರ್ಚಿಯನ್ನು ವಿತರಿಸಲಾಯಿತು.

ಈ ಸಂದರ್ಭ ವುಡ್ಸ್ ಅಧ್ಯಕ್ಷರಾದ ವಸಂತ್ ಕುಮಾರ್ ಮಾತನಾಡಿ, ರೋಟರಿ ವತಿಯಿಂದ ಶಿಕ್ಷಣ, ಆರೋಗ್ಯಕ್ಕೆ ಸಂಬAಧಿಸಿದ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆ, ಪರಿಸರ ಸಂರಕ್ಷಣೆ ಮುಂತಾದ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ರೋಟರಿ ಸಲಹೆಗಾರರಾದ ಬಿ.ಜಿ. ಅನಂತ ಶಯನ ಅವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನೊಂದವರಿಗೆ ಬೆಳಕಾಗಿ ಸೇವೆ ನೀಡುತ್ತಿರುವ ತನಲ್ ಆಶ್ರಮದ ಸೇವೆಯನ್ನು ಶ್ಲಾಘಿಸಿದರು.

ರೋಟರಿ ಉಪ ರಾಜ್ಯಪಾಲ ದೇವಣಿರ ತಿಲಕ್ ಮಾತನಾಡಿದರು.

ಇದೇ ಸಂದರ್ಭ ಆಶ್ರಮದ ಸಂಸ್ಥಾಪಕರಾದ ಮಹಮ್ಮದ್ ಅವರನ್ನು ವುಡ್ಸ್ ವತಿಯಿಂದ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಮೀಳಾ ಶೆಟ್ಟಿ, ರವಿಕುಮಾರ್, ಬಿ.ಜಿ. ಅನಂತಶಯನ ಇವರುಗಳು ಹಾಡುಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ಲೀಲಾವತಿ, ಧನಂಜಯ ಶಾಸ್ತಿç. ಝಹೀರ್ ಅಹ್ಮದ್, ಕಿರಣ್ ಕುಂದರ್, ಗೀತಾ ಸೂರ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಹರೀಶ್ ಕಿಗ್ಗಾಲ್ ವಂದಿಸಿದರು.