ಮಡಿಕೇರಿ, ಫೆ. ೨೫: ಹಾಕಿ ಇಂಡಿಯ ವತಿಯಿಂದ ಮಹಾರಾಷ್ಟçದ ಪುಣೆಯಲ್ಲಿ ಮಾರ್ಚ್ ೧೩ರಿಂದ ೨೩ರತನಕ ೧೪ನೇ ಸೀನಿಯರ್ ವಿಮೆನ್ ನ್ಯಾಷನಲ್ ಚಾಂಪಿಯನ್ ಹಾಕಿ ಪಂದ್ಯಾವಳಿ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಹಾಕಿ ಕರ್ನಾಟಕ ತಂಡಕ್ಕೆ ಆಟಗಾರ್ತಿಯರನ್ನು ಆಯ್ಕೆ ಮಾಡಲು ಫೆಬ್ರವರಿ ೨೮ರಂದು ಬೆಳಿಗ್ಗೆ ೧೦ ರಿಂದ ಬೆಂಗಳೂರಿನ ಶಾಂತಿನಗರದಲ್ಲಿರುವ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಆಯ್ಕೆ ಶಿಬಿರ ಆಯೋಜಿಸಲಾಗಿದೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.