ಸುಂಟಿಕೊಪ್ಪ, ಫೆ. ೨೫: ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಸ್ತು, ಸಂಯಮ, ಗೌರವ ಕಲಿಸಿದಾಗ ಮಾತ್ರ ಮುಂದಿನ ಉತ್ತಮ ಸಮಾಜಮುಖಿ ವ್ಯಕ್ತಿಯಾಗುವುದಕ್ಕೆ ಸಾದ್ಯವಾಗುತ್ತದೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಹೇಳಿದರು.
ಇಲ್ಲಿನ ಜ್ಞಾನಧಾರ ಶಿಶು ವಿಹಾರದ ಸಭಾಂಗಣದಲ್ಲಿ ನಡೆದ ೭ನೇ ವರ್ಷದ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಳೆಯುವ ಹಂತದಲ್ಲೇ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕöÈತಿ, ಆಚಾರ-ವಿಚಾರಗಳನ್ನು, ವಿದ್ಯೆಯನ್ನು ನೀಡುತ್ತಿರುವ ಶಿಕ್ಷಕಿಯವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಶಾಲೆಗೆ ಸರಕಾರ ಸೌಲಭ್ಯಗಳನ್ನು ಪಂಚಾಯಿತಿ ಮೂಲಕ ನೀಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃಧಿ ಅಧಿಕಾರಿ ವಿ.ಜಿ. ಲೋಕೇಶ್ ಮಾತನಾಡಿ, ಶಾಲೆ ಎಂದರೆ ಸರ್ವಧರ್ಮಗಳ ಸಮನ್ವಯ ಕೇಂದ್ರ ಪೂಜಾ ಸ್ಥಳವಾಗಿದೆ. ಇದನ್ನು ಎಲ್ಲರೂ ಗೌರವಿಸಬೇಕು. ಪೋಷಕರು ಮತ್ತು ಪ್ರಾಥಮಿಕ ಹಂತದ ಶಿಕ್ಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಶಿಸ್ತು, ಸಂಯಮ, ಗೌರವ ಇವುಗಳನ್ನು ಕಲಿಸಿದಾಗ ಮಾತ್ರ ಅವರ ಮುಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಗಳಾಗದೆ ಸಮಾಜದ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾದ್ಯವಾಗುತ್ತದೆ ಎಂದರು. ಇಲ್ಲದಿದ್ದಲ್ಲಿ ಬೆಳೆದು ದೊಡ್ಡವರಾದಾಗ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದಕ್ಕೆ ಅವಕಾಶ ಕೊಡಬೇಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ವಿಹಾರದ ಟ್ರಸ್ಟ್ನ ಅಧ್ಯಕ್ಷೆ ಲೀಲಾ ಮೇದಪ್ಪ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜ್ಞಾನಧಾರ ಶಿಶು ವಿಹಾರದ ಟ್ರಸ್ಟಿ ಉಪಾಧ್ಯಕ್ಷೆ ಗಿರಿಜಾ ಉದಯಕುಮಾರ್, ಕೊಡಗರಹಳ್ಳಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಕಾವೇರಪ್ಪ, ಜ್ಞಾನಧಾರ ಶಿಶು ವಿಹಾರದ ಮುಖ್ಯ ಶಿಕ್ಷಕಿ ಶಾಂತಿ ದೇವರಾಜ್, ಮಹಿಳಾ ಸಂಘದ ನಿರ್ದೇಶಕರು, ಸದಸ್ಯರು ಉಪಸ್ಥಿತ ರಿದ್ದರು. ನಂತರ ಪುಟಾಣಿ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು.