ಶನಿವಾರಸಂತೆ, ಫೆ. ೨೪: ಗಂಡಾಗಲಿ-ಹೆಣ್ಣಾಗಲಿ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಅಗತ್ಯವಿದೆ ಎಂದು ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಡಾ. ಜಾನೆಕೆರೆ ಸಾಗರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಆರಂಭವಾದ ನೂತನ “ದ ಬ್ರೆöÊನಿ ಬೀಜ್ ಪ್ರೀಮಿಯಂ ಫ್ರೀ ಸ್ಕೂಲ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ. ಶಿಕ್ಷಣ ಸಂಸ್ಥೆಗಳು ಜ್ಞಾನ ದೇಗುಲಗಳಾಗಿವೆ ಎಂದರು. ಮುಖ್ಯ ಅತಿಥಿ ಸಾಹಿತಿ ಶ.ಗ. ನಯನತಾರಾ ಮಾತನಾಡಿ, ವಿದ್ಯಾಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸ್ಪರ್ಧಾ ಮನೋಭಾವ ತೋರ್ಪಡಿಸಬೇಕೇ ಹೊರತು ವ್ಯವಹಾರಿಕವಾಗಿ ಪೈಪೋಟಿ ನೀಡಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ “ದ ಬ್ರೆöÊನಿ ಬೀಸ್ ಪ್ರೀಮಿಯಂ ಫ್ರೀ ಸ್ಕೂಲ್’’ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಆರ್. ಚೇತನ್ ಗೌಡ ಮಾತನಾಡಿ, ದಾನಗಳಲ್ಲಿ ವಿದ್ಯಾದಾನವೂ ಶ್ರೇಷ್ಠವಾಗಿದ್ದು, ಶಿಕ್ಷಣದ ಜತೆ ಸಂಸ್ಕೃತಿ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಲಾಗುವುದು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್, ವ್ಯವಸ್ಥಾಪಕಿ ನೀತು, ಮಲೆನಾಡು ರಕ್ಷಣಾ ಸೇನೆ ಕೊಡಗು ಜಿಲ್ಲಾ ಅಧ್ಯಕ್ಷ ರಕ್ಷಿತ್ ಗೌಡ, ಸಕಲೇಶಪುರ ತಾಲೂಕು ಉಪಾಧ್ಯಕ್ಷ ತೇಜಸ್ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಈ.ಡಿ. ದಯಾನಂದ್, ದ ಬ್ರೆöÊನಿ ಬೀಜ್ ಪ್ರೀಮಿಯಂ ಫ್ರೀ ಸ್ಕೂಲ್ ಕೋ-ಆರ್ಡಿನೇಟರ್ ಹಾಗೂ ಕೋಶಾಧಿಕಾರಿ ಕೃತಿಕಾ ದಿವಾಕರ್ ಗೌಡ, ಕಾರ್ಯದರ್ಶಿ ಶ್ವೇತಾ ನವೀನ್, ನಿರ್ದೇಶಕರು, ಸಿಬ್ಬಂದಿ ಹಾಜರಿದ್ದರು.