ಮಡಿಕೇರಿ, ಫೆ. ೨೪: ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯ ವತಿಯಿಂದ ತಾ. ೨೯ ರಿಂದ ಮಾರ್ಚ್ ೯ ರತನಕ ಮಹಾಶಿವರಾತ್ರಿ ಮಹೋತ್ಸವ ಜರುಗಲಿದೆ.
ತಾ. ೨೯ ರಂದು ಬೆಳಿಗ್ಗೆ ೯.೩೦ಕ್ಕೆ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಗುವುದು. ಅಂದು ಸಂಕಲ್ಪ ದೀಕ್ಷೆ ನೆರವೇರಲಿದೆ. ಮಾ. ೮ ರಂದು ಬೆಳಿಗ್ಗೆ ೯.೩೦ ಗಂಟೆಗೆ ಗಣೇಶ ಎಸ್ಟೇಟ್ ಹಾಗೂ ಕಾವೇರಿ ಬಡಾವಣೆಯಿಂದ ಬೆಳಿಗ್ಗೆ ೧೧ ಗಂಟೆಗೆ ಸುಭಾಶ್ ನಗರ, ಬಿಳಿಗೇರಿ ಜಂಕ್ಷನ್‌ನಿAದ ಹೊರೆ ಕಾಣಿಕೆ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.