ಮಡಿಕೇರಿ, ಫೆ. ೨೪: ಕ್ರೀಡಾಕೂಟದ ಮುಖೇನ ಮೊಗೇರ ಸಮಾಜದ ಸಂಘಟನೆಯಾಗಿದ್ದು, ಕ್ರೀಡಾಕೂಟದೊಂದಿಗೆ ಜನಾಂಗದ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಗೌರವ ಅಧ್ಯಕ್ಷ, ಕೊಡಗು ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಪಿ.ಎಂ. ರವಿ ಕರೆಕೊಟ್ಟರು.

ಸಿದ್ದಾಪುರ-ಅಮ್ಮತ್ತಿ ಹೋಬಳಿ ಅಮೃತ ಯುವ ಮೊಗೇರ ಸೇವಾ ಸಮಾಜದ ವತಿಯಿಂದ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿರುವ ಪ್ರೀಮಿಯರ್ ಲೀಗ್-೨ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ತುಳುನಾಡಿನಿಂದ ಆಗಮಿಸಿ ನೆಲೆಸಿರುವ ಮೊಗೇರ ಸಮಾಜದವರು ಸುಮಾರು ೩೬ ಸಾವಿರ ಮಿತಿಯಲ್ಲಿದ್ದಾರೆ. ಕ್ರೀಡಾಕೂಟ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಸಂಘಟಿತರಾಗಿದ್ದು, ಸಂಘಟನೆಯನ್ನು ಬೆಂಬಲಿಸುವದರೊAದಿಗೆ ನಮ್ಮ ಪದ್ಧತಿ, ಸಂಸ್ಕೃತಿಯನ್ನು ಮರೆಯಬಾರದೆಂದು ಹೇಳಿದರು. ಸಮಾಜದ ಸಂಘಟನೆಗೆ ಅಮೃತ ಮೊಗೇರ ಸಮಾಜ ಹೆಚ್ಚಿನ ಕೊಡುಗೆ ನೀಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಬಿ. ಜನಾರ್ಧನ್ ಮಾತನಾಡಿ, ಕ್ರೀಡೆಯಿಂದಾಗಿ ಸಮಾಜದಲ್ಲಿ (ಮೊದಲ ಪುಟದಿಂದ) ಸಾಕಷ್ಟು ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.

ಅತಿಥಿಯಾಗಿದ್ದ ಶಕ್ತಿ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ; ಮೊಗೇರ ಸಮಾಜದವರು ಬಹಳಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಸಂಘಟನೆಯೊAದಿಗೆ ದೈವ-ಕಾರ್ಣಿಕರ ಬಗ್ಗೆ ಮುಂದಿನ ಪೀಳಿಗೆ ಹಾಗೂ ನಾಡಿನ ಜನತೆಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬ್ರಹ್ಮ ಮೊಗೇರರ್ ಯಕ್ಷಗಾನ ಪ್ರದರ್ಶನ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊAಡು ಹೋಗುವಂತೆ ಹೇಳಿದರು.

ಪ್ರಾಢಶಾಲೆಯ ಮುಖ್ಯ ಶಿಕ್ಷಕ ದೊಡ್ಡ ತಮ್ಮಯ್ಯ ಮಾತನಾಡಿ; ದೇಹಕ್ಕೆ ವ್ಯಾಯಾಮ ಒದಗಿಸಲು ಕ್ರೀಡೆ ಒಂದು ಉತ್ತಮ ಪ್ರಕ್ರಿಯೆಯಾಗಿದೆ. ಇಲ್ಲಿ ಯುವಕರು ಸೇರಿಕೊಂಡು ಐಪಿಎಲ್ ಮಾದರಿಯಲ್ಲಿ ಕ್ರೀಡಾಕೂಟ ಹಮ್ಮಿಕೊಂಡಿರುವದು ಶ್ಲಾಘನೀಯವೆಂದು ಹೇಳಿದರು. ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಪಿ.ಕೆ. ಮಂಜು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಮಾಜದ ಕ್ರೀಡಾಧ್ಯಕ್ಷ ಪಿ.ಸಿ.ರಮೇಶ್ ಉದ್ಘಾಟಿಸಿದರು. ವೇದಿಕೆಯಲ್ಲಿ ತಾಲೂಕು ಮೊಗೇರ ಸಮಾಜದ ಮಾಜಿ ಗೌರವ ಅಧ್ಯಕ್ಷ ಪಿ.ಕೆ. ಚಂದ್ರು, ಅಮೃತ ಮೊಗೇರ ಸಮಾಜದ ಗೌರವ ಅಧ್ಯಕ್ಷ ಎಂ.ಜಿ. ಚಂದ್ರ, ಇತರರು ಉಪಸ್ಥಿತರಿದ್ದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು.