ಸುಂಟಿಕೊಪ್ಪ, ಫೆ. ೨೩: ಸುಂಟಿಕೊಪ್ಪ ಗ್ರಾಮ ದೇವರ ೫ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ತಾ. ೨೭ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಶ್ರೀ ಗೌರಿ ಗಣೇಶೋತ್ಸವ ಸಮಿತಿ, ಶ್ರೀ ಮಸಣಿಕಮ್ಮ ದೇವಸ್ಥಾನ ಸಮಿತಿ, ವೃಕ್ಷೆÆÃದ್ಭವ ಶ್ರೀ ಮಹಾಗಣಪತಿ ದೇವಾಲಯ ಸಮಿತಿ ಮಧುರಮ್ಮ ಬಡಾವಣೆ, ಟಿ.ಸಿ.ಎಲ್. ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ, ಶ್ರೀ ದೇವಿಯ ಶ್ರೀ ಅಣ್ಣಪ್ಪ ದೇವಸ್ಥಾನ ಸಮಿತಿ, ಬಾಳೆಕಾಡು ಶ್ರೀ ಮುತ್ತಪ್ಪ ದೇವಸ್ಥಾನ, ಗದ್ದೆಹಳ್ಳ ಶ್ರೀ ಕೊಡಂಗಲ್ಲೂರು ಶ್ರೀ ಕುರುಂಬ ಭಗವತಿ ದೇವಾಲಯ, ಮದುರಮ್ಮ ಬಡಾವಣೆ ಶ್ರೀ ನಾಗದೇವತೆ, ಶ್ರೀ ಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಗದ್ದೆಹಳ್ಳದ ಬಸವೇಶ್ವರ ದೇವಾಲಯ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ದೇವರ ಬನದಲ್ಲಿ ಪೂಜಾ ಕಾರ್ಯಕ್ರಮ ಬೆಳಿಗ್ಗೆ ೮ ರಿಂದ ೯ ರವರೆಗೆ ಶುದ್ಧಿ ಕಲಶ, ೯.೩೦ಕ್ಕೆ ಮಹಾಮಂಗಳಾರತಿ, ೯.೩೦ ರಿಂದ ೧೦.೩೦ ಹರಕೆ ಸಮರ್ಪಣೆ, ೧.೩೦ ರಿಂದ ೩.೩೦ ರವರೆಗೆ ಅನ್ನಸಂತರ್ಪಣೆ ನಡೆಯಲಿದೆ.