ಗೋಣಿಕೊಪ್ಪ ವರದಿ, ಫೆ. ೨೩: ಮಾಯಮುಡಿ ಗ್ರಾಮದ ಕಮಟೆ ಮಹಾದೇವರ ವಾರ್ಷಿಕೋತ್ಸವ ಆರಂಭಗೊAಡಿದ್ದು, ತಾ. ೨೪ ರಂದು ದೊಡ್ಡ ಹಬ್ಬ ಜರುಗಲಿದೆ.

ಮಂಗಳವಾರ ರಾತ್ರಿ ಕೊಡಿಮರ ನಿಲ್ಲಿಸುವ ಅಚರಣೆ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಭಕ್ತರು ಪಾಲ್ಗೊಂಡು ಕಾರ್ಯ ನೆರವೇರಿಸಿದರು. ಬುಧವಾರ ಗಣಪತಿಗೆ ಪಂಚಕಜ್ಜಾಯ, ಈಶ್ವರನಿಗೆ ಬಿಲ್ವ ಪತ್ರಾರ್ಚನೆ ನೆರವೇರಿತು.

ತಾ. ೨೨ ರಂದು ಬೆಳಿಗ್ಗೆ ಇರ್‌ಬೊಳಕ್, ಈಶ್ವರನಿಗೆ ಕ್ಷೀರಾಭಿಷೇಕ, ತಾ. ೨೩ ರಂದು ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ನರ‍್ಪು ಜರುಗಲಿದೆ. ತಾ. ೨೪ ರಂದು ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ೬ ಗಂಟೆಗೆ ದೇವರ ದರ್ಶನ, ಅಭ್ಯಂಜನ ಸ್ನಾನ, ದೇವರ ನೃತ್ಯ, ವಸಂತಪೂಜೆ, ವಿಷ್ಣುಮೂರ್ತಿ ಮತ್ತು ಗುಳಿಗನಿಗೆ ಪೂಜೆ ನೆರವೇರಲಿದೆ.