ಕುಶಾಲನಗರ, ಫೆ. ೨೩: ಕುಶಾಲನಗರ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ಬಳಿ ಸ್ಮಶಾನಕ್ಕೆಂದು ಮೀಸಲಿರುವ ೨.೮೦ ಎಕರೆ ಜಾಗದಲ್ಲಿ ಒಕ್ಕಲಿಗ ಸಮುದಾಯದ ಸ್ಮಶಾನಕ್ಕೆ ಪ್ರತ್ಯೇಕ ಜಾಗ ಒದಗಿಸುವಂತೆ ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಪ್ರಮುಖರು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕಲಿಗರ ಸಂಘದ ಪ್ರಮುಖರಾದ ವಿ.ಜೆ.ನವೀನ್ ಹಾಗೂ ಜಿ.ಬಿ.ಜಗದೀಶ್, ಕುಶಾಲನಗರ, ಮುಳ್ಳುಸೋಗೆ ವ್ಯಾಪ್ತಿ ಒಳಗೊಂಡAತೆ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಳೆ ಮಾರುಕಟ್ಟೆ ಬಳಿ ಇತರ ಎರಡು ಜನಾಂಗಕ್ಕೆ ಪ್ರತ್ಯೇಕವಾಗಿ ಸ್ಮಶಾನ ಒದಗಿಸಿರುವಂತೆ ಒಕ್ಕಲಿಗ ಸಮುದಾಯಕ್ಕೆ ರುದ್ರಭೂಮಿಗೆ ಸ್ಥಳ ನೀಡಿ ಜಾಗದ ಮಾಲೀಕ್ವತದ ದಾಖಲೆ ನಿರ್ಮಿಸಿಕೊಡಬೇಕಿದೆ ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.