ಸಿದ್ದಾಪುರ, ಫೆ. ೨೩: ಎಸ್.ಎಸ್.ಎಫ್ ಸಂಘಟನೆ ವತಿಯಿಂದ ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಸೀನಿಯರ್ ವಿಭಾಗದ ಇಂಗ್ಲೀಷ್ ಹ್ಯಾಂಡ್ ರೈಟಿಂಗ್ ಸ್ಪರ್ಧೆಯಲ್ಲಿ ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮದ ಮುಹಮ್ಮದ್ ಹಾಶಿರ್ ನೆಲ್ಲಿಕ್ಕಲ್ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾನೆ. ಆಂಧ್ರಪ್ರದೇಶದ ಗುಂಟಕಲ್ನಲ್ಲಿ ನಡೆದ ಎಸ್.ಎಸ್.ಎಫ್. ರಾಷ್ಟಿçÃಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕದಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊಡಗು ಜಿಲ್ಲೆಯಂದ ಪಾಲ್ಗೊಂಡ ೩ ವಿದ್ಯಾರ್ಥಿಗಳಲ್ಲಿ ಮುಹಮ್ಮದ್ ಹಾಶಿರ್ ನೆಲ್ಲಿಕ್ಕಲ್ ಸೀನಿಯರ್ ವಿಭಾಗದ ಇಂಗ್ಲೀಷ್ ಹ್ಯಾಂಡ್ ರೈಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನಗಳಿಸಿದ್ದಾನೆ. ತಹಲೀಮುದ್ದೀನ್ ಸುನ್ನಿ ಮದರಸ ಹಾಗೂ ಪಾಲಿಬೆಟ್ಟ ಲೂಡ್ಸ್ ಹಿಲ್ ಕಾನ್ವೆಂಟ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದು, ಚೆನ್ನಯ್ಯನಕೋಟೆ ಗ್ರಾಮದ ಅಬ್ದುಲ್ ಜಲೀಲ್ ಮತ್ತು ಸಲ್ಮತ್ ದಂಪತಿ ಪುತ್ರ.