ಗೋಣಿಕೊಪ್ಪಲು, ಫೆ. ೨೩: ಪೊನ್ನಂಪೇಟೆ ಕಾಟ್ರಕೊಲ್ಲಿಯ ಮಾತಾಯಿ ಪುರುಷ ಸ್ವ-ಸಹಾಯ ಸಂಘದ ವತಿಯಿಂದ ತಾ. ೮ ರಂದು ಮಹಾಶಿವರಾತ್ರಿ ಕಾರ್ಯಕ್ರಮವು ಪೊನ್ನಂಪೇಟೆ ಬಸ್ ನಿಲ್ದಾಣದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಎಂ.ಬಿ. ಅನೀಶ್ ತಿಳಿಸಿದ್ದಾರೆ.
ಕಾಟ್ರಕೊಲ್ಲಿಯಲ್ಲಿರುವ ಸಂಘದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಪ್ರಾರಂಭಗೊAಡು ೧೯ ವರ್ಷಗಳು ಕಳೆದಿವೆ. ಸತತ ೧೮ ವರ್ಷಗಳಿಂದ ಮಹಾಶಿವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ರಾತ್ರಿ ೮ ಗಂಟೆಯಿAದ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸೇರಿದಂತೆ ಸಭಾ ಕಾರ್ಯಕ್ರಮವು ನಡೆಯಲಿದೆ. ಸಭೆಗೆ ಕ್ಷೇತ್ರದ ಶಾಸಕÀ ಎ.ಎಸ್. ಪೊನ್ನಣ್ಣ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅಣ್ಣೀರ ಹರೀಶ್ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾ. ೧ ರೊಳಗೆ ೯೯೮೦೪೬೧೪೩೨, ೯೯೦೨೧೧೦೮೦೪ ದೂರವಾಣಿಯಲ್ಲಿ ನೋಂದಾಯಿಸಬಹುದಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪಿ.ಎಂ. ಮೊಹಮ್ಮದ್, ಕಾರ್ಯದರ್ಶಿ ಇ.ಎ. ಹರೀಶ್, ಖಜಾಂಚಿ ವಿ.ಬಿ. ಶೇಖರ, ಮಾಜಿ ಅಧ್ಯಕ್ಷರುಗಳಾದ ಕೆ.ಬಿ. ವಿನು, ಎಂ.ಎA. ಸಾಧಿಕ್ ಹಾಗೂ ಮಾಜಿ ಖಜಾಂಚಿ ಬಿ.ಕೆ. ಅಣ್ಣಪ್ಪ ಉಪಸ್ಥಿತರಿದ್ದರು.