ಗೋಣಿಕೊಪ್ಪ ವರದಿ, ಫೆ. ೨೩: ಪೊನ್ನಂಪೇಟೆ ಎ.ಆರ್.ಎಸ್. ಫಾರಂ ಸಮೀಪ ಇರುವ ಭಗವತಿ, ವಿಷ್ಣು, ಗುಳಿಗ ದೇವರ ವಾರ್ಷಿಕ ಗುರುದಿ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ ವಿಷ್ಣು, ಗುಳಿಗ ದೇವಸ್ಥಾನದಲ್ಲಿ ಪೂಜೆ, ಭಗವತಿ ದೇವಸ್ಥಾನದಲ್ಲಿ ಉಷಾ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಅನ್ನಸಂತರ್ಪಣೆ ನೆರವೇರಿತು. ಭಗವತಿ ದೇವಾಲಯದಲ್ಲಿ ಗುರುದಿ ಪೂಜೆ ಹಾಗೂ ದೇವರಿಗೆ ಹರಕೆ ಒಪ್ಪಿಸಲಾಯಿತು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕಾಡ್ಯಮಾಡ ಅಶೋಕ್ ದೇವಯ್ಯ ಮಾತನಾಡಿ, ಸ್ವರ್ಣ ಪ್ರಶ್ನೆಯಲ್ಲಿ ದೊರೆತ ಮಾಹಿತಿಯಂತೆ ಕಾಡು ಸೇರಿದ್ದ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದರು.