ಮುಳ್ಳೂರು, ಫೆ. ೨೧: ಸಮೀಪದ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ರೈತರು ಪಂಪ್‌ಸೆಟ್‌ಗೆ ಅಳವಡಿಸಿರುವ ೧೦ ಹೆಚ್.ಪಿ. ವಿದ್ಯುತ್ ಮೋಟರಿನ ಬಾಕಿಯಾಗಿರುವ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಶನಿವಾರಸಂತೆ ಚೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವ ಪ್ರಕರಣಕ್ಕೆ ಸಂಬAಧಪಟ್ಟAತೆ ಹಂಡ್ಲಿ ಭಾಗದ ರೈತರು ಶನಿವಾರಸಂತೆ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರಕಾರ ರೈತರ ೧ ಹೆಚ್.ಪಿ. ಯಿಂದ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಸರಬರಾಜು ನೀಡಿದೆ. ಆದರೆ ವಿದ್ಯುತ್ ಇಲಾಖೆ ಜಿಲ್ಲೆಯಲ್ಲಿ ರೈತರು ಈ ಹಿಂದೆ ಬಾಕಿ ಮಾಡಿರುವ ೧೦ ಎಚ್‌ಪಿ ವರೆಗಿನ ಪಂಪ್‌ಸೆಟ್‌ನ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ. ಬೇಸಿಗೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಫಿ, ಕಾಳು ಮೆಣಸು ಮತ್ತು ಇತರೆ ತೋಟದ ಬೆಳೆಗಳಿಗೆ ಪಂಪ್‌ಸೆಟ್‌ನ ಮೂಲಕ ನೀರು ಹಾಯಿಸುವ ಅಗತ್ಯ ಇರುತ್ತದೆ. ಇಂಥಹ ಸಂದರ್ಭದಲ್ಲಿ ಚೆಸ್ಕಾಂ ರೈತರ ಕಡಿತ ಮಾಡಿರುವ ಬಗ್ಗೆ ರೈತರು ಅವರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಗಾರರು ಬಿಸಿಲು ಇದ್ದ ಸಂದರ್ಭದಲ್ಲಿ ಮಾತ್ರ ಪಂಪ್‌ಸೆಟ್‌ನ ಮೂಲಕ ನೀರು ಹಾಯಿಸುತ್ತೇವೆ. ಮಳೆಯಾದರೆ ನಮಗೆ ಇದರ ಅಗತ್ಯ ಇರುವುದಿಲ್ಲ. ಕಾಫಿ ಹೂವು ಬಿಡಲು ಮತ್ತು ಕಾಳು ಮೆಣಸಿಗೆ ಈಗ ನೀರು ಹಾಯಿಸುವ ಅಗತ್ಯ ಇರುತ್ತದೆ. ಶಾಸಕರು ವಿದ್ಯುತ್ ಕಡಿತಗೊಳಿಸಬಾರದೆಂದು ಇಲಾಖೆಗೆ ಸೂಚಿಸಿದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೀರಾ. ಮತ್ತೆ ಮರು ಸಂಪರ್ಕ ನೀಡುವಂತೆ ಚೆಸ್ಕಾಂ ಶಾಖಾಧಿಕಾರಿ ಸುದೀಪ್ ಅವರ ಮುಂದೆ ಆಗ್ರಹಿಸಿದರು. ಕೊನೆಗೆ ಚೆಸ್ಕಾಂ ಶಾಖಾಧಿಕಾರಿ ಸುದೀಪ್ ಪಂಪ್‌ಸೆಟ್‌ಗಳಿಗೆ ತಾತ್ಕಾಲಿಕ ಸಮಯದವರೆಗೆ ಮರು ಸಂಪರ್ಕ ಕಲ್ಪಿಸಿ ಕೊಡುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊAಡರು.
ಹAಡ್ಲಿ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಮಧು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮನು ಹೆಬ್ಲುಸೆ, ಮಹಾದೇವಪ್ಪ, ಸಂದೀಪ್, ಎಸ್.ಕೆ.ವೀರಪ್ಪ, ಎಸ್.ಕೆ.ಶಿವಪ್ಪ, ವೇಣುಕುಮಾರ್, ಶಿವಕುಮಾರ್ ಇನ್ನು ಮುಂತಾದವರಿದ್ದರು.