ಮಡಿಕೇರಿ, ಫೆ. ೨೧: ವನ್ಯಜೀವಿ ಉತ್ಪನ್ನವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸವ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ ೧೮ಕ್ಕೆ ನಿಗದಿಪಡಿಸಿದೆ.

ವೀರಾಜಪೇಟೆಯ ಪಟ್ಟಡ ರಂಜಿ ಪೂಣಚ್ಚ ಹಾಗೂ ಕಕ್ಕಬ್ಬೆ ನಾಲಡಿಯ ಕೋಡಿಮಣಿಯಂಡ ಕುಟ್ಟಪ್ಪ ಅವರು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಅವರ ಮಾರ್ಗದರ್ಶನದಲ್ಲಿ ವಕೀಲ ಕೊಟ್ಟಂಗಡ ಸೋಮಣ್ಣ ಅವರ ಮೂಲಕ ತಡೆಯಾಜ್ಞೆ ಕೋರಿ ಉಚ್ಚನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರು ಕರ್ನಾಟಕ ಸರಕಾರ, ಅರಣ್ಯ ಇಲಾಖೆ, ವಿವಿಧ ಹಂತದ ಅಧಿಕಾರಿಗಳು ಸೇರಿ ೮ ಮಂದಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡಿದ್ದಾರೆ.