*ಗೋಣಿಕೊಪ್ಪ, ಫೆ. ೨೨: ಮಹಿಳೆಯರು ಜೇನು ಕೃಷಿ ಕಡೆ ಹೆಚ್ಚಿನ ಗಮನಹರಿಸಿದಾಗ ಕುಟುಂಬದ ಆರ್ಥಿಕ ಸುಧಾರಣೆಗೆ ಕಾರಣವಾಗಬಲ್ಲದು ಎಂದು ಬೆಂಗಳೂರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಉಪನಿರ್ದೇಶಕ ಮೊಸೆಸ್‌ಸಿಂಗ್ ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಜಿಲ್ಲಾ ಕೃಷಿ ವಿಸ್ತರಣಾ ಶಿಕ್ಷಣ ಘಟಕ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಅರಣ್ಯ ಮಹಾವಿದ್ಯಾಲಯದ ವಿಚಾರ ಸಂಕೀರ್ಣ ಕೊಠಡಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜೇನು ಕೃಷಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ಜೇನಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಗಳಿವೆ. ಇದರ ಸದುಪಯೋಗವನ್ನು ಪಡೆದುಕೊಂಡು ಜೇನು ಕೃಷಿಯ ಮೂಲಕವೇ ಆರ್ಥಿಕ ಸುಧಾರಣೆಯನ್ನು ಕಂಡುಕೊಳ್ಳಬಹುದಾಗಿದೆ.

ಈ ಉದ್ದೇಶದಿಂದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಹಲವಾರು ಯೋಜನೆಗಳನ್ನ ಜಾರಿಗೆ ತಂದು ಕೃಷಿಕರಿಗೆ ಬಲವಾಗಿ ನಿಂತಿದೆ. ಈ ಉದ್ದೇಶದ ಫಲಾನುಭವಿಗಳಾಗಲು ಸಂಬAಧಿಸಿದ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಇಲಾಖೆಯ ಸಹಕಾರದ ಅನುದಾನವನ್ನು ಗಳಿಸಿಕೊಳ್ಳುವಂತಾಗಬೇಕು. ಈ ಮೂಲಕ ಕೊಡಗಿನ ಜೇನು ಕೃಷಿಯನ್ನು ಮತ್ತಷ್ಟು ಜಾಗತಿಕ ಮಾರುಕಟ್ಟೆಯಲ್ಲಿ ವಿಸ್ತರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಬಾರ ತಾಂತ್ರಿಕ ಅಧಿಕಾರಿ ಭಾಗೀರಥಿ ಮಾತನಾಡಿ, ನೂರಾರು ರೋಗಗಳಿಗೆ ಔಷಧಿಯಾಗುವ ಗುಣವನ್ನು ಹೊಂದಿರುವ ಜೇನು ದೇಶ, ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಹೊಂದಿದೆ. ಅಂತಹ, ಅಮೂಲ್ಯವಾದ ಗುಣಮಟ್ಟದ ಜೇನುಗಳನ್ನು ಉತ್ಪಾದಿಸುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪ್ರಭಾಕರ್ ಮಾತನಾಡಿ, ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸದ್ಬಳಕ್ಕೆ ಹೆಚ್ಚು ಮಾಡಬೇಕು. ನೈಸರ್ಗಿಕವಾಗಿ ಸಿಗುವ ಜೇನಿಗೆ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚಿನ ಬೇಡಿಕೆ ಇದೆ. ಸ್ವಾವಲಂಬಿಗಳಾಗಿ ಬದುಕಲು ನೈಸರ್ಗಿಕ ಕೃಷಿಯತ್ತ ಹೆಜ್ಜೆ ಹಾಕುವುದು ಉತ್ತಮ ಬೆಳವಣಿಗೆಯಾಗಿದೆ,ಈ ನಿಟ್ಟಿನಲ್ಲಿ ಕೆವಿಕೆ ಕೃಷಿ ಹೈನುಗಾರಿಕೆಗೆ ಸಂಬAಧಿಸಿದAತೆ ರೈತರಿಗೆ ತರಬೇತಿಯನ್ನು ನೀಡುತ್ತಾ, ಕೃಷಿಕರ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.

ಪ್ರಗತಿಪರ ಜೇನು ಕೃಷಿಕ ರಾಣಾ ನಂಜಪ್ಪ, ಕೃಷಿ ವಿಸ್ತರಣಾ ಶಿಕ್ಷಣ ಘಟಕದಣ ಡಾ. ಆರ್.ಎನ್. ಕೆಂಚರೆಡ್ಡಿ ಮಾತನಾಡಿದರು. ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ನಂದಕುಮಾರ್, ಮಹಾದೇವ, ಅಂಬುಜಾಕ್ಷಿ ವಿಜಯಕುಮಾರ್, ಜೆ.ಜೆ. ಮಂಜುನಾಥ್ ಇವರುಗಳನ್ನು ಸನ್ಮಾನಿಸಲಾಯಿತು.

ಡಾ. ಜಡೆಗೌಡ ಉಪಸ್ಥಿತರಿದ್ದರು. ವಿದ್ಯಾ ಜಗದೀಶ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಗೋರಪ್ಪನವರ ಬರಮಪ್ಪ, ಕೆ.ಎಂ. ನಾಣಯ್ಯ ನಿರ್ವಹಿಸಿದರು. ನಂತರ ತಾಂತ್ರಿಕ ಸಮಾವೇಶ ವಧುವನ ಭೇಟಿ, ಪ್ರಾತ್ಯಕ್ಷಿಕೆಗಳ ವೀಕ್ಷಣೆ ಕಾರ್ಯಕ್ರಮಗಳು ನಡೆದವು.