ಬೆಂಗಳೂರು, ಫೆ. ೨೧: ಜಿಲ್ಲೆಯ ಜಮ್ಮಾಮಲೆ ಅಸೋಸಿಯೇಷನ್ ಪ್ರಮುಖರು ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ವಿಧಾನ ಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. ಕೊಡಗು ಜಿಲ್ಲೆಯ ಮೀಸಲು ಅರಣ್ಯದೊಳಗೆ ಇರುವ ಕಂದಾಯಕ್ಕೆ ಒಳಪಟ್ಟ ಜಮ್ಮಾಮಲೆ ಹಿಡುವಳಿ ದಾರರ ಆಸ್ತಿಯ ಹಕ್ಕನ್ನು ಪರಿಹಾರ ಧನ ಪಡೆದು ಸರ್ಕಾರಕ್ಕೆ ಒಪ್ಪಿಸುವುದರೊಂದಿಗೆ ಸರಿಸುಮಾರು ೮೦ ಸಾವಿರ ಎಕರೆ ತಲಕಾವೇರಿ ವನ್ಯಜೀವಿ ವ್ಯಾಪ್ತಿಯನ್ನು ಮಾನವ ರಹಿತದ ಅರಣ್ಯವಾಗಿ ಮಾರ್ಪಡಿಸಿ ಆನೆ ಕಾರಿಡಾರ್ ಆಗಿ ಪರಿವರ್ತಿಸಿದರೆ ನಿರಂತರ ಕಾಡಾನೆ ದಾಳಿಯಿಂದ ಜೀವ ಹಾನಿಯ ಜೊತೆಗೆ ಕೃಷಿ ನಷ್ಟವನ್ನು ಅನುಭವಿಸುವ ರೈತರಿಗೆ, ಜನರಿಗೆೆ ಅನುಕೂಲವಾಗಲಿದೆ ಎಂದು ಗಮನ ಸೆಳೆದರು.

ಈ ಕುರಿತು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದು ನಿಯೋಗಕ್ಕೆ ಭರವಸೆ ನೀಡಿದರು.

ಈ ಸಂದÀರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯ ದರ್ಶಿ ಮಂಜುನಾಥ್ ಪ್ರಸಾದ್, ಜಮ್ಮಾಮಲೆ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಪೆಮ್ಮಯ್ಯ, ಆಡಳಿತ ಮಂಡಳಿಯ ಸದಸ್ಯರುಗಳಾದ ಸೋಮಣ್ಣ, ಪೂವಯ್ಯ ಇನ್ನಿತರರು ಉಪಸ್ಥಿತರಿದ್ದರು.