ಐಗೂರು, ಫೆ. ೨೨: ಮಕ್ಕಳಿಗೆ ಶಾಲೆಗಳ ವಿಷಯ ಬಂದಾಗ ಅಂಗನವಾಡಿಯೇ ಮೊದಲ ಪಾಠ ಶಾಲೆ ಎಂದು ಹರದೂರು ಗ್ರಾ.ಪಂ. ಅಧ್ಯಕ್ಷೆÀ ಉಷಾ ಅವರು ಕಿವಿಮಾತು ಹೇಳಿದರು.

ಅವರು ಅಮೃತ ಗ್ರಾಮ ಯೋಜನೆಯಡಿಯಲ್ಲಿ ಹರದೂರು ಗ್ರಾ.ಪಂ. ವ್ಯಾಪ್ತಿಯ ಹೊಸತೋಟ, ಹರದೂರು, ಮಲ್ಲಿಕಾರ್ಜುನ ಕಾಲೋನಿ, ಅಂಜನ ಬೆಟ್ಟಗಿರಿ ಮತ್ತು ಗರಗಂದೂರು ಅಂಗನವಾಡಿ ಕೇಂದ್ರಗಳಿಗೆ ಆಟಿಕೆ ಸಾಮಗ್ರಿಗಳು ಮತ್ತು ಆಟವಾಡಲು ಜಾರು ಬಂಡಿಗಳನ್ನು ಉಚಿತವಾಗಿ ಪಂಚಾಯಿತಿ ವತಿಯಿಂದ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಚಾಯಿತಿಗಳಿಗೆ ಇನ್ನೂ ಅನುದಾನಗಳು ಬಂದರೆ ಆದ್ಯತೆ ಮೇರೆಗೆ ಉನ್ನತೀಕರಿಸಲಾಗುವುದು ಎಂದು ಪಿ.ಡಿ.ಓ. ಪೂರ್ಣಿಮಾ ಅವರು ಸಭೆಗೆ ತಿಳಿಸಿದರು. ಸ್ವಾಗತ ಮತ್ತು ವಂದನಾರ್ಪ ಣೆಯನ್ನು ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಹೊಸತೋಟ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಉಷಾ, ಉಪಾಧ್ಯಕ್ಷÀ ಸಲೀಂ, ಪಿ.ಡಿ.ಓ. ಪೂರ್ಣಿಮಾ, ಗ್ರಾ.ಪಂ. ಸದಸ್ಯರಾದ ಸುಬ್ಬಯ್ಯ, ರಮೇಶ್, ಮುಸ್ತಫ, ಭೋಜಮ್ಮ, ಕುಸುಮ, ಉಷಾ ಕುಂಬಾರ ಬಾಣೆ ಮತ್ತು ಅಂಗನವಾಡಿ ಶಿಕ್ಷಕಿಯರಾದ ಅಸ್ಮ, ದೇವಕಿ, ಚಂದನ ಮತ್ತು ಸಹಾಯಕಿ ಜಯಂತಿ ಭಾಗವಹಿಸಿದ್ದರು.