ಮಡಿಕೇರಿ, ಫೆ. ೨೧: ಎರಡು ವರ್ಷಗಳಿಗೊಮ್ಮೆ ನಡೆಯುವ ಜಾಗತಿಕ ಮಟ್ಟದ ಸಿಂಗಾಪುರ ಏರ್ ಶೋ ಈ ಬಾರಿ ಇದೀಗ ತಾ.೨೦ರಿಂದ ಪ್ರಾರಂಭವಾಗಿ ತಾ.೨೪ ರವರೆಗೂ ಜರುಗಲಿದ್ದು, ಕೇಂದ್ರ ರಕ್ಷಣಾ ಸಂಶೋಧನಾ ವಿಭಾಗದ ನಿವೃತ್ತ ಸಾರ್ವಜನಿಕ ಸಂರ್ಪಕಾಧಿಕಾರಿ ಮೂಲತಃ ಕೊಡಗಿನ ತಲಕಾವೇರಿ ಯವರಾದ ಜಯಪ್ರಕಾಶ್ ರಾವ್ ಭಾರತದಿಂದ ಆಮಂತ್ರಿತರಾಗಿ ಭಾಗವಹಿಸಲಿದ್ದಾರೆ.

ದೇಶದ ಯಶಸ್ವಿ ಯೋಜನೆಯಾದ ತೇಜಸ್ ಯುದ್ಧ ವಿಮಾನ ವಿನ್ಯಾಸ ಕೇಂದ್ರದಲ್ಲಿ ಕೂಡಾ ಮುಖ್ಯ ಪಿ.ಆರ್.ಓ ಆಗಿ ಸೇವೆ ಸಲ್ಲಿಸಿರುವ ಜಯಪ್ರಕಾಶ್ ಅವರು ೭ ಕನ್ನಡ ಪುಸ್ತಕಗಳನ್ನು ಬರೆದಿದ್ದು, ಅವರ ಸೇವಾವಧಿಯಲ್ಲಿ ೩ ರಕ್ಷಣಾ ಸಚಿವರುಗಳಲ್ಲದೆ ಡಾ.ಕಲಾಂ ಅವರ ಶಿಷ್ಟಾಚಾರ ಹಾಗೂ ಸಮನ್ವಯ ಆಧಿಕಾರಿಯಾಗಿ ಕೂಡ ದುಡಿದಿದ್ದಾರೆ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.