ಮಡಿಕೇರಿ, ಫೆsÀ. ೨೧: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ‘ಸಾಂದೀಪನಿ ಶಿಷ್ಯ ವೇತನ’ ಅಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ ೧ ರ ತನಕ ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಸಕಾಲದಲ್ಲಿ ನೀಡುವ ಮೂಲಭೂತ ಉದ್ದೇಶವನ್ನು ಹೊಂದಿರುತ್ತದೆ. ಮಂಡಳಿಗೆ ಮಂಜೂರಾದ ಸಾಂದೀಪನಿ ಶಿಷ್ಯವೇತನ ಯೋಜನೆಯನ್ನು ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಾಂದೀಪನಿ ಶಿಷ್ಯವೇತನ ಯೋಜನೆಯಡಿ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ರೂ. ೧೫ ಸಾವಿರ ನೀಡಲಾಗುವುದು ಹಾಗೂ ಸಾಂದೀಪನಿ ಶಿಷ್ಯ ವೇತನ ಯೋಜನೆಯ ಮುಂದುವರೆದ ಭಾಗವಾಗಿ ಯು.ಜಿ.-ಪಿ.ಜಿ. ವಿವಿಧ ಕೋರ್ಸ್ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಅರ್ಹತೆ ಪಡೆದು ದಾಖಲಾದ ವಿದ್ಯಾರ್ಥಿಗಳು ದಾಖಲಾತಿಗೆ ಪಾವತಿಸಿರುವ ಶುಲ್ಕದ ಮೊತ್ತದ ೨/೩ ಭಾಗವನ್ನು ಗರಿಷ್ಠ ಮೊತ್ತ ರೂ. ೧ ಲಕ್ಷಗಳಿಗೆ ಮಿತಿಗೊಳಿಸಿ ಪಾವತಿ ಮಾಡಲಾಗುವುದು.
ಸದರಿ ಯೋಜನೆಯಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ ೧ ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: ೦೮೦ ೨೯೬೦೫೮೮೮ಗೆ ಸಂಪರ್ಕಿಸುವುದು. ಇ-ಮೇಲ್ ವಿಳಾಸ ಛಿoಟಿಣಚಿಛಿಣ.ಞsbಜb@ಞಚಿಡಿಟಿಚಿಣಚಿಞಚಿ.gov.iಟಿ/ mಜ.ಞsbಜb೨೦೨೧@gmಚಿiಟ.ಛಿom ಅನ್ನು ಸಂಪರ್ಕಿಸಿ.