ಮಡಿಕೇರಿ, ಫೆ. ೨೨: ಪೊನ್ನಂಪೇಟೆ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿ ಒಕ್ಕೂಟದ ನೂತನ ಪದಾಧಿಕಾರಿಗಳ ಸಮಾರಂಭವನ್ನು ಮುಖ್ಯ ಅತಿಥಿಗಳಾದ ಎಲ್&ಡಿ ಮ್ಯಾನೇಜರ್ ವಿಭಾ ಎಂ. ಬೋಪಣ್ಣ ಉದ್ಘಾಟಿಸಿದರು.
ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ, ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜ್, ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಬಿ.ಬಿ., ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮೋಹಿತ್ ಮಾಚಯ್ಯ ಅವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ಎಂ. ಬಸವರಾಜ್ ಮಾತನಾಡಿ, ವಿದ್ಯಾರ್ಥಿ ಒಕ್ಕೂಟವು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯೋಜನಕಾರಿ ಎಂದು ಹೇಳಿದರು. ಈ ಸಂದರ್ಭ ವಿದ್ಯಾರ್ಥಿ ಒಕ್ಕೂಟದ ಸಂಯೋಜಕ ವಿಘ್ನೇಶ್ ಟಿ. ಅವರು (ಸಹ ಪ್ರಾಧ್ಯಾಪಕ) ವಿದ್ಯಾರ್ಥಿ ಒಕ್ಕೂಟದ ಸದಸ್ಯರುಗಳಿಗೆ ಪ್ರಮಾಣವಚನ ಬೋಧಿಸಿದರು. ನಂತರ ಮಾತನಾಡಿದ ಮುಖ್ಯ ಅತಿಥಿಗಳಾದ ವಿಭಾ ಎಂ. ಬೋಪಣ್ಣ ಅವರು ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಂದರ್ಶನಗಳಲ್ಲಿ ಉತ್ತಮ ಸಾಧನೆ ಮಾಡಲು ಒಳನೋಟಗಳನ್ನು, ಕಾರ್ಯತಂತ್ರಗಳ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿ ಗಳೊಂದಿಗೆ ಹಂಚಿಕೊAಡರು. ನಂತರ ವಿಭಾಗದ ವಾರ್ಷಿಕ ಪುರವಣಿ ‘ಸಂವಿದ್’ ಅನ್ನು ಡಾ. ಎಂ.ಸಿ. ಕಾರ್ಯಪ್ಪ ಅವರು ಬಿಡುಗಡೆ ಮಾಡಿದರು.
ನಂತರ ಗೌರವ ಅತಿಥಿಗಳಾದ ಡಾ. ಎಂ.ಸಿ. ಕಾರ್ಯಪ್ಪ ಅವರು ಮಾತನಾಡಿ, ಹೇಗೆ ಕೃತಕ ಬುದ್ಧಿಮತ್ತೆಯು ನಮ್ಮ ಸಮಾಜದಲ್ಲಿ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಚಿನ್ನಪ್ಪ ಎನ್.ಸಿ. ಮತ್ತು ವೆನ್ನೆಲಾ ನಡೆಸಿಕೊಟ್ಟರು. ಎ.ಐ. ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಸ್ವಾಗತಿಸಿದರು. ವಂದನಾರ್ಪಣೆಯನ್ನು ಮೋಹಿತ್ ಮಾಚಯ್ಯ ಮಾಡಿದರು. ನಂತರ ವಿಭಾ ಎಂ. ಬೋಪಣ್ಣ ಅವರು ‘ನೈಲಿಂಗ್ ದಿ ಇಂಟರ್ವ್ಯೂಃ ಯಶಸ್ಸಿಗೆ ತಯಾರಿ ತಂತ್ರಗಳು’ ಎಂಬ ಶೀರ್ಷಿಕೆಯಡಿ ಉದ್ಯೋಗ ಸಂದರ್ಶನಗಳಲ್ಲಿ ಉತ್ತಮ ಸಾಧನೆ ಮಾಡುವ ಸಂಬAಧ ಮಾರ್ಗದರ್ಶನವನ್ನು ನೀಡಿದರು.