ಮಡಿಕೇರಿ, ಫೆ. ೨೨: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಹೊದವಾಡ ಗ್ರಾಮದ ಜನಪ್ರತಿನಿಧಿ ಎಂ.ವೈ. ಮಾಹಿನ್‌ನನ್ನು ನಾಪೋಕ್ಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ ಪಂಚಾಯಿತಿ ಸದಸ್ಯ ಮಾಹಿನ್ ಅವರ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಮಾಹಿನ್ ತಲೆಮರೆಸಿಕೊಂಡಿದ್ದ. ಮಾಹಿನ್‌ನನ್ನು ಹುಣಸೂರಿನಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆಯ ವಿವರ:

ಖಾಸಗಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ೯ ವರ್ಷ ಪ್ರಾಯದ ಬಾಲಕ ಶಾಲೆ ಮುಗಿಸಿ ಎಂದಿನAತೆ ಮನೆಗೆ ಬಂದಿದ್ದನು. ಜನವರಿ ೧೬ರ ಸಂಜೆ ೬:೧೫ ಗಂಟೆಗೆ ಮಸೀದಿಗೆ ಹೋದ ಅಪ್ರಾಪ್ತ ಬಾಲಕ ಸಂಜೆ ೭ ಗಂಟೆಗೆ ಮನೆಗೆ ಹಿಂತಿರುಗಿದ್ದ. ಮನೆಗೆ ಬಂದ ಬಾಲಕನು ತುಂಬಾ ಸುಸ್ತಾದಂತೆ ಕಂಡ ಆತನ ತಾಯಿ ವಿಚಾರಿಸಿದ್ದಾರೆ. ನಾನು ಹಾಲು ತರಲೆಂದು ಸಂಜೆ ಅಂಗಡಿಗೆ ಹೋದಾಗ ಮಾಹಿನ್ ತನ್ನ ಮನೆಗೆ ಕರೆದೊಯ್ದು ವಿವಸ್ತçಗೊಳಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ೫೦ ರೂ. ನೀಡಿ ಈ ಘಟನೆಯನ್ನು ಯಾರಿಗೂ ಹೇಳಬೇಡ ಅಂತ ಹೇಳಿ ಕಳುಹಿಸಿದ್ದಾರೆ ಎಂದು ತಾಯಿಗೆ ವಿವರಿಸಿದ್ದಾನೆ. ಬಾಲಕನ ತಾಯಿ ಇದಕ್ಕಿಂತ ಮುಂಚೆ ನಿನ್ನನ್ನು ಮಾಹಿನ್ ಅವರು ಕರೆದಿದ್ದರೇ ಎಂದು ಪ್ರಶ್ನಿಸಿದ್ದಾರೆ. ಜನವರಿ ೯ ರಂದು ಸಂಜೆ ೭ ಗಂಟೆಗೆ ಮಾಹಿನ್ ಅವರು ಕಾರಿನಲ್ಲಿ ಬಾ ಎಂದು ಸುತ್ತಾಡಿಕೊಂಡು ಬರೋಣ ಎಂದು ಹೇಳಿ, ಮೂರ್ನಾಡು ರಸ್ತೆಯ ಯಾವುದೋ ಒಂದು ತೋಟದೊಳಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು. ನಂತರ ಅದೇ ಕಾರಿನಲ್ಲಿ ನನ್ನನ್ನು ವಾಪಸ್ಸು ಕರೆದುಕೊಂಡು ಬಂದು, ೨೦ ರೂ.ಗಳನ್ನು ನೀಡಿ ಮನೆಗೆ ಬಿಟ್ಟಿದ್ದರು. ಈ ಎಲ್ಲಾ ಘಟನೆಗಳನ್ನು ತಿಳಿದ ಅಪ್ರಾಪ್ತ ಬಾಲಕನ ತಾಯಿ ನಾಪೋಕ್ಲು ಪೊಲೀಸ್ ಠಾಣೆಗೆ ಜ.೧೬ರಂದು ದೂರು ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದನು. ೨೯ ದಿನಗಳ ಬಳಿಕ ಆರೋಪಿಯ ಬಂಧನವಾಗಿದೆ.

(ಕೆ.ಎಂ ಇಸ್ಮಾಯಿಲ್ ಕಂಡಕರೆ)