ವೀರಾಜಪೇಟೆ, ಫೆ. ೨೧: ಮನೆಯಲ್ಲಿದ್ದ ವಿವಾಹಿತ ಮಹಿಳೆ ರಾತ್ರಿ ವೇಳೆ ಪರಾರಿಯಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪತಿ ದೂರು ದಾಖಲಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ನಿವಾಸಿ ಅಶ್ರಫ್ ಎಂಬವರ ಪತ್ನಿ ರಸೀನಾ (೨೯) ನಾಪತ್ತೆಯಾದ ಮಹಿಳೆ.
ಘಟನೆ ವಿವರ: ತಾ. ೮ ರ ರಾತ್ರಿ ಅಶ್ರಫ್ ಅವರು ತಮ್ಮ ನಿವಾಸದಲ್ಲಿ ರಾತ್ರಿ ಸುಮಾರು ೮ ರ ವೇಳೆಯಲ್ಲಿ ಟಿ.ವಿ. ನೋಡುತ್ತಿದ್ದರು. ಈ ಸಂದರ್ಭ ಪತ್ನಿ ರಸೀನಳನ್ನು ಹಲವು ಬಾರಿ ಕರೆದಿದ್ದಾರೆ. ಪತ್ನಿ ರಸೀನಾಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಆತಂಕದಿAದ ಮನೆಯಲ್ಲಿ ಹಾಗೂ ಹೊರಗಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಪತ್ನಿಯ ಕುರಿತು ಮಾಹಿತಿ ದೊರಕದಿದ್ದಾಗ ಗ್ರಾಮದಲ್ಲಿ ಹುಡುಕಾಟ ನಡೆಸಿದ ವೇಳೆ ಮನೆಯ ಸನಿಹದ ನಿವಾಸಿ ಸಮೀರಾ ಎಂಬಾತ ರಸೀನಾಳನ್ನು ಕರೆದುಕೊಂಡು ತೆರಳಿರುವುದಾಗಿ ಗೊತ್ತಾಗಿದೆ. ಅಶ್ರಫ್ ವೀರಾಜಪೇಟೆ ನಗರ ಠಾಣೆಗೆ ಹಾಜರಾಗಿ ಪತ್ನಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ. ಹಲವು ದಿನಗಳಿಂದ ಗ್ರಾಮ ಸೇರಿದಂತೆ ಇತರ ಭಾಗಗಳಲ್ಲಿ ಪತ್ನಿಯ ಪತ್ತೆಗಾಗಿ ಹಲವು ಭಾಗಗಳಲ್ಲಿ ಹುಡುಕಾಟ ನಡೆಸಿದ ಅಶ್ರಫ್ ಅವರು ತಾ.೧೮ ರಂದು ವೀರಾಜಪೇಟೆ ನಗರ ಠಾಣೆಯಲ್ಲಿ ಪತ್ನಿಯ ಪತ್ತೆಗಾಗಿ ಮಾಧ್ಯಮದ ಮೂಲಕ ಪ್ರಕಟಿಸಲು ಕೋರಿಕೊಂಡಿದ್ದಾರೆ. ಕಾಣೆಯಾಗಿರುವ ಮಹಿಳೆಯು ಮಲಯಾಳಂ, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದು. ಸಾಧಾರಣ ಮೈಕಟ್ಟು, ಗೋಧಿ ಬಣ್ಣ ಮೈಕಟ್ಟು ಹೊಂದಿದ್ದಾರೆ. ಮಹಿಳೆಯ ಮಾಹಿತಿ ದೊರೆತಲ್ಲಿ. ಕೊಡಗು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ೦೮೨೭೨-೨೨೮೩೩೦, ವೀರಾಜಪೇಟೆ ನಗರ ಪೊಲೀಸ್ ಠಾಣೆ ೦೮೨೭೪- ೨೫೭೩೩೦,೯೪೮೦೮೦೪೯೫೫ ಸಂಪರ್ಕಿಸುವAತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.