ಮಡಿಕೇರಿ, ಫೆ. ೨೧: ಭಾಗಮಂಡಲ-ಕೋರAಗಾಲದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವವನ್ನು "ಜ್ಞಾನೋತ್ಸವ" ಎಂಬ ಹೆಸರಿನಲ್ಲಿ ವಿಜೃಂಭಣೆಯಿAದ ಆಚರಿಸ ಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಜಿ. ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತೆ ಡಾ. ರಾಣಿ ಮಾಚಯ್ಯ, ಮೇ. ಡಾ. ಕುಶ್ವಂತ್ ಕೋಳಿಬೈಲು, ಪ್ರಮುಖರಾದ ತೋಳಂಡ ನಂದಾ ದೇವಯ್ಯ ಹಾಗೂ ಸ್ಥಳ ದಾನಿಗಳಾದ ಹಿರಿಯ ಸದಸ್ಯ ಆರ್. ಗಣಪತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲಾ ಅಭಿವೃದ್ಧಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮಚ್ಚುರ ರವೀಂದ್ರ ಹಾಗೂ ಉಪಾಧ್ಯಕ್ಷ ತೆಕ್ಕಡೆ ನಾಗೇಶ್ ಭಾಗವಹಿಸಿದ್ದರು. ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಜನನಿ, ನುತಿಶ್ರೀ, ಲಿಂಚನ ಹಾಗೂ ರಝಾನ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಶ್ವೇತನ್ ಚಂಗಪ್ಪ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಶಿಕ್ಷಕ ಬಿ.ಬಿ. ಕಿಶೋರ್ ಕುಮಾರ್ ಶಾಲಾ ಶೈಕ್ಷಣಿಕ ವರದಿ ವಾಚನವನ್ನು ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿ ಗಣ್ಯರನ್ನು ಹಾಗೂ ೧೫ ವರ್ಷಕ್ಕಿಂತಲೂ ಹೆಚ್ಚಿನ ವರ್ಷ ಸೇವೆ ಸಲ್ಲಿಸಿದಂತಹ ನಾಲ್ವರು ಶಿಕ್ಷಕಿಯರು ಹಾಗೂ ಹಿರಿಯ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿ ಗಣ್ಯರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ತಿಳಿಸಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಸ್ಥೆಯ ಅಧ್ಯಕ್ಷ ಸಿ.ಜಿ. ರವಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಶಾಲೆಯು ಬೆಳೆದು ಬಂದ ಹಾದಿಯ ಕುರಿತು ವಿವರಿಸಿದರು. ಶಾಲೆಯ ಸಹ ಶಿಕ್ಷಕಿ ಕೃಪಾ ಕಾವೇರಮ್ಮ ಸ್ವಾಗತಿಸಿದರೆ, ಸಹ ಶಿಕ್ಷಕಿ ಚಿತ್ರ ಹಾಗೂ ಮಣವಟ್ಟಿರ ದಯಾ ಚಿಣ್ಣಪ್ಪ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಮಿಥುನ್ ಚಂಗಪ್ಪ ವಂದನಾರ್ಪಣೆಯನ್ನು ನೆರವೇರಿಸಿ ಕೊಟ್ಟರು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೃತ್ಯ ಶಿಕ್ಷಕಿ ಪ್ರೀತ ಕೃಷ್ಣ ಉದ್ಘಾಟಿಸಿದರು.