ಕಡಂಗ, ಫೆ. ೨೨: ಎಡಪಾಲ ಪ್ರೀಮಿಯರ್ ಲೀಗ್ನ ೧೦ನೇ ಆವೃತ್ತಿಯ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾಟವು ಎಡಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಿತು. ಎರಡು ದಿನ ನಡೆದ ಪಂದ್ಯಾಟದಲ್ಲಿ ೮ ಬಲಿಷ್ಠ ತಂಡಗಳು ಭಾಗವಹಿಸಿದ್ದವು.
ಹತ್ತನೇ ಆವೃತ್ತಿಯ ಕ್ರಿಕೆಟ್ ಚಾಂಪಿಯನ್ ತಂಡವಾಗಿ ಫ್ಲೆöÊಯಿಂಗ್ ಈಗಲ್ಸ್ ಬೆಂಗಳೂರು ತಂಡ ರನ್ನರ್ಸ್ ತಂಡವಾಗಿ ರೈಸಿಂಗ್ ಸ್ಟಾರ್ ಕತರ್ ತಂಡ ಹೊರಹೊಮ್ಮಿತು. ಬೆಸ್ಟ್ ಬ್ಯಾಟ್ಸ್ಮನ್ ಆಗಿ ಈಗಲ್ಸ್ ತಂಡದ ಶಕೀರ್ ಮತ್ತು ಉತ್ತಮ ಬೌಲರ್ ಪ್ರಶಸ್ತಿಯನ್ನು ರೆಡ್ ಬುಲ್ ತಂಡದ ಹಂಸ ಪೆಡೆದುಕೊಂಡರು. ತೀರ್ಪುಗಾರಿಕೆಯನ್ನು ಮಡಿಕೇರಿಯ ಹನೀಫ ಹಾಗೂ ಅಭಿ ನಡೆಸಿಕೊಟ್ಟರು ವೀಕ್ಷಕ ವಿವರಣೆ ನವಾಜ್ ಹಾಗೂ ಸುಹೇಲ್ ನಿರ್ವಹಿಸಿದರು. ವಾಲಿಬಾಲ್ ಪಂದ್ಯಾಟದ ವಿಜೇತರಾಗಿ ಹನೀಫ ಮಾಲೀಕತ್ವದ ತೂಫಾನ್ ವಾರಿಯರ್ಸ್ ಹಾಗೂ ರನ್ನರ್ಸ್ ತಂಡವಾಗಿ ನವಾಜ್ ಮಾಲೀಕತ್ವದ ಬ್ಲಾಕ್ ಬಸ್ಟರ್ ತಂಡ ಪ್ರಶಸ್ತಿ ಪಡೆಯಿತು. ವಾಲಿಬಾಲ್ ಪಂದ್ಯಾಟದ ಉತ್ತಮ ಆಟಗಾರ ಪ್ರಶಸ್ತಿಯನ್ನು ಯಹ್ಯಾ ಅಟ್ಯಾಕ್ಕರ್ ರಫೀಕ್ ಸೆಟರ್ ಸಾಹಿದ್ ಪೆಡೆದುಕೊಂಡರು. ಅತ್ಯುತ್ತಮವಾಗಿ ಕ್ರಿಕೆಟ್ ಕ್ರೀಡಾಕೂಟ ನಡೆಸಿ ಕೊಟ್ಟಂತಹ ಉಸ್ಮಾನ್ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದ ಅತಿಥಿಗಳಾಗಿ ರಾಷ್ಟçಪ್ರಶಸ್ತಿ ವಿಜೇತ ಅಧ್ಯಾಪಕ ಉಮ್ಮರ್ ಮಾಸ್ಟರ್, ಪಂಚಾಯಿತಿ ಸದಸ್ಯರಾದ ಮೊಹಮ್ಮದ್, ರಶೀದ್ ಕುಪ್ಪಂಡ ಉಮರ್ ಸಿಆರ್ಪಿಎಫ್, ಎಡಪಾಲ ಕ್ರಿಕೆಟ್ ಪ್ರೀಮಿಯರ್ ಲೀಗ್ ಸ್ಥಾಪಕ ಹನೀಫ ಉಪಸ್ಥಿತರಿದ್ದರು.