ಗೋಣಿಕೊಪ್ಪ ವರದಿ, ಫೆ. ೨೨: ಬೆಂಗಳೂರು ಅಶೋಕ ಲಲಿತ್ ಹೊಟೇಲ್‌ನಲ್ಲಿ ನಂದಿನಿ ನಾಗರಾಜ್ ತಂಡ ಆಯೋಜಿಸಿದ್ದ ಮಿಸಸ್ ಅಯಿಂಡ್ ಮಿಸ್ಟರ್ ರೋಲ್ ಮಾಡಲ್ ಸ್ಪರ್ಧೆಯಲ್ಲಿ ಕೊಡಗಿನ ಆರ್‌ಕೆ ಯೂನಿವರ್ಸ್ ಕೂರ್ಗ್ ತಂಡ ಸ್ಥಾನಗಿಟ್ಟಿಸಿಕೊಂಡಿತು.

ಕೊಣಿಯAಡ ಕಾವ್ಯ ಸಂಜು ಅವರಿಗೆ ಮಿಸಸ್ ಇಂಡಿಯಾ ಬ್ರಾö್ಯಂಡ್ ಅಂಬಾಸಿಡರ್ ಕಿರೀಟ ದೊರೆಯಿತು. ನಾಮೇರ ಶರ್ಲಿ ಬೋಪಣ್ಣ ಅವರಿಗೆ ಮಿಸಸ್ ಇಂಡಿಯಾ ರೋಲ್ ಮಾಡೆಲ್ ಹಾಗೂ ಬೆಸ್ಟ್ ಟ್ಯಾಲೆಂಟೆಡ್ ಸ್ಥಾನ ದೊರಕಿತು. ತಂಬಾAಡ ತೇಜ ದಿನೇಶ್‌ಗೆ ಮಿಸಸ್ ಇಂಡಿಯಾ ಕರ್ವಿ, ಮಿಸಸ್ ಡ್ಯಾಜ್ಲಿಂಗ್ ಕ್ಯೂನ್, ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್‌ಗೆ ಮಿಸಸ್ ಇಂಡಿಯಾ ಸ್ಕಾಟ್‌ಲ್ಯಾಂಡ್ ಕುಯಿನ್, ಬೆಸ್ಟ್ ಫಿಟ್‌ನೆಸ್ ಕುಯಿನ್ ಕಿರೀಟ ಲಭಿಸಿತು. ಆರ್‌ಕೆ ಯೂನಿವರ್ಸ್ ಕೂರ್ಗ್ನ ಆರ್. ಕಮಲ್ ಅವರಿಗೆ ಉತ್ತಮ ನವೋದ್ಯಮಿ ಸ್ಥಾನ ದೊರೆಯಿತು.