ಪೊನ್ನAಪೇಟೆ, ಫೆ. ೨೨: ಅರಣ್ಯಶಾಸ್ತç ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಹುದ್ದೆಯಲ್ಲಿ ಶೇ.೧೦೦ ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ, ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ ೧೪ ನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳಕ್ಕೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ವಿದ್ಯಾರ್ಥಿಗಳಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದರು, ಅರಣ್ಯ ಕಾಲೇಜು ವಿದ್ಯಾರ್ಥಿಗಳ ಬೇಡಿಕೆ ನ್ಯಾಯಯುತವಾಗಿದೆ. ಅರಣ್ಯ ಸಂರಕ್ಷಣೆ ಬಗ್ಗೆ ೪ ವರ್ಷಗಳ ಅಭ್ಯಾಸ ಮಾಡಿರುವ ಕಾರಣ ಬಿ.ಎಸ್ಸಿ ಅರಣ್ಯಶಾಸ್ತç ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯ ಹುದ್ದೆಗಳಲ್ಲಿ ಆದ್ಯತೆ ನೀಡಲೇಬೇಕು. ಅರಣ್ಯಶಾಸ್ತç ವಿದ್ಯಾರ್ಥಿಗಳು ಕಾಡಿನ ರಕ್ಷಣೆ ಮತ್ತು ಪೋಷಣೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರುವುದರಿAದ, ಆಯಾಯ ಹುದ್ದೆಗೆ ಬೇಕಾದ ತರಬೇತಿಯನ್ನು ಪಡೆದುಕೊಂಡವರನ್ನೇ ಆಯ್ಕೆ ಮಾಡುವುದು ಸರಿಯಾದ ಕ್ರಮ. ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಲೋಕಸಭಾ ಚುನಾವಣೆ ನಂತರ ಈ ವಿಷಯದ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವೀನ್ ಗಣಪತಿ, ವೀರಾಜಪೇಟೆ ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಗಣಪತಿ, ಪಕ್ಷದ ಮುಖಂಡರಾದ ಚೋಡುಮಾಡ ಶ್ಯಾಮ್, ಮಾಚಿಮಡ ರವೀಂದ್ರ, ಕೊಡಗು ಬಿಜೆಪಿ ಸಂಚಾಲಕ ಸಚಿನ್ ಮತ್ತು ಸಂಪತ್ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.