ಮಡಿಕೇರಿ, ಫೆ. ೨೨: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಅಶೋಕಪುರ ಮತ್ತು ಚೌಡೇಶ್ವರಿ ದೇವಾಲಯ ಬಳಿಯಲ್ಲಿನ ಅಂಗನವಾಡಿಗಳಿಗೆ ವಿವಿಧ ಸಾಮಗ್ರಿಗಳನ್ನು ನೀಡಲಾಯಿತು.

ಊಟದ ತಟ್ಟೆ, ಲೋಟ, ನೆಲಹಾಸು, ತಟ್ಟೆ ಇರಿಸಲು ಸ್ಟಾಂಡ್‌ಗಳನ್ನು ಮಿಸ್ಟಿ ಹಿಲ್ಸ್ ಮೂಲಕ ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್. ಕೇಶವ್ ವಿತರಿಸಿದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್. ಕೇಶವ್ ವಿತರಿಸಿದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ನಿರ್ದೇಶಕರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ., ಪೊನ್ನಚ್ಚನ ಮಧುಸೂದನ್, ಜಗದೀಶ್ ಪ್ರಶಾಂತ್, ಬಿ.ಕೆ. ರವೀಂದ್ರ ರೈ, ವಿನೋದ್ ಅಂಬೆಕಲ್, ಪ್ರಸಾದ್ ಗೌಡ, ನಗರಸಭೆಯ ಮಾಜಿ ಸದಸ್ಯೆ ವೀಣಾಕ್ಷಿ, ರೋಟರಿ ಸದಸ್ಯ ರವಿಕುಮಾರ್ ಹಾಜರಿದ್ದರು.