ಸೋಮವಾರಪೇಟೆ, ಫೆ. ೨೦ : ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗಳು ಹಾಗೂ ಹೊರಗುತ್ತಿಗೆ ಆಧಾರದ ನೌಕರರು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಾಫಿ ಟೀ ಖರ್ಚಿಗೆಂದೇ ೧ ಸಾವಿರ ಹಣ ಪಡೆಯುತ್ತಿದ್ದಾರೆ. ಅರ್ಜಿಗಳ ವಿಲೇವಾರಿಗೆ ಸಾವಿರ, ಲಕ್ಷಗಳವರೆಗೆ ಲಂಚ ಕೇಳುತ್ತಿದ್ದಾರೆ ಎಂದು ಪಂಚಾಯಿತಿಯ ಕೆಲ ಸದಸ್ಯರೇ ಆರೋಪಿಸುವ ಮೂಲಕ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ವೇದಿಕೆ ಒದಗಿಸಿದರು.

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ನವೀನ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ, ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿತು.

ಖಾತೆ ವರ್ಗಾವಣೆಯ ವಿಷಯ ಚರ್ಚೆಯಾಗುತ್ತಿದ್ದ ಸಂದರ್ಭ ಸದಸ್ಯೆ ಶೀಲಾ ಡಿಸೋಜ ಅವರು, ಪ್ರತಿಯೊಂದು ಖಾತೆ ವರ್ಗಾವಣೆಯ ಅರ್ಜಿಗಳು ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಒಳಪಡಿಸಬೇಕು. ಒಳಗಿಂದ ಒಳಗೆ ವರ್ಗಾವಣೆ ಮಾಡಬಾರದು. ಕೆಲ ಸಿಬ್ಬಂದಿಗಳು ಖಾತೆ ವರ್ಗಾವಣೆಗೆ ಸಾವಿರದಿಂದ ಲಕ್ಷಗಳವರೆಗೆ ಬೇಡಿಕೆ ಇಡುತ್ತಿದ್ದಾರೆ. ಬಡವರು ಹಣ ನೀಡಲಾಗದೇ ಪರಿತಪಿಸುತ್ತಿದ್ದಾರೆ ಎಂದು ಆರೋಪಿಸಿದರು.

(ಮೊದಲ ಪುಟದಿಂದ) ಇದಕ್ಕೆ ದನಿಗೂಡಿಸಿದ ಸದಸ್ಯ ಜೀವನ್, ಪಂಚಾಯಿತಿಯಲ್ಲಿ ಹಣ ಇದ್ದವರ ಕೆಲಸ ಮಾತ್ರ ಆಗುತ್ತದೆ. ಬಡವರ ಕೆಲಸ ಆಗುತ್ತಿಲ್ಲ. ಟೀ ಕಾಫಿ ಖರ್ಚು ಎಂದು ೧ ಸಾವಿರ ಕೇಳುತ್ತಿದ್ದಾರೆ. ಕೆಲವೊಂದು ಖಾತೆ ವರ್ಗಾವಣೆಗೆ ಒಂದೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಾರ್ವಜನಿಕರು ನಮ್ಮ ಬಳಿ ಅಳಲು ತೋಡಿಕೊಂಡ ಸಂದರ್ಭ ನಾವುಗಳು ಸಿಬ್ಬಂದಿಗಳನ್ನು ಪ್ರಶ್ನಿಸಿದರೆ, ‘ಮೆಂರ‍್ಸ್ಗಳಿಗೆ ಯಾಕ್ರಿ ಹೇಳ್ತೀರಾ?’ ಎಂದು ಗದರಿಸುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು, ಅಂತಹ ಸಿಬ್ಬಂದಿಗಳ ಬಗ್ಗೆ ದಾಖಲೆ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹಣ ಪಡೆದಿರುವ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಇಲ್ಲೇ ತೋರಿಸುತ್ತೇವೆ. ಸ್ಥಳದಲ್ಲೇ ಅವರನ್ನು ಕೆಲಸದಿಂದ ತೆಗೀತೀರಾ? ಎಂದು ಜೀವನ್ ಪ್ರಶ್ನಿಸಿದರು. ಸಾರ್ವಜನಿಕರಿಂದ ಆರೋಪ ಕೇಳಿ ಸಾಕಾಗಿದೆ. ಇರುವ ಸಿಬ್ಬಂದಿಗಳಿಗೆ ಸರಿಯಾಗಿ ಕೆಲಸ ಮಾಡಲು ಹೇಳಿ. ತಪ್ಪಿದ್ದಲ್ಲಿ ಜನರಿಂದ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯಿತಿಗೆ ರೂ. ೫ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅವಧಿ ಮುಗಿದರೂ, ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಸದಸ್ಯರಾದ ಜೀವನ್, ಮೋಹಿನಿ, ಮೃತ್ಯುಂಜಯ ಆರೋಪಿಸಿದರು. ಮುಂದಿನ ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಈ ಬಗ್ಗೆ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.

ಯಾವುದೇ ಕಾಮಗಾರಿಯಾದರೂ ಸಂಬAಧಿಸಿದ ಇಂಜಿನಿಯರ್ ಸ್ಥಳಕ್ಕೆ ಬಂದು ಕಾಮಗಾರಿ ವೀಕ್ಷಣೆ ಮಾಡದಿಲ್ಲದಿರುವುದರಿಂದ ಕಾಟಾಚಾರದ ಕೆಲಸವಾಗುತ್ತಿದೆ ಎಂದು ಸದಸ್ಯ ಚಂದ್ರು ಹೇಳಿದರು. ನಿಲ್ಲಿಸಿರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಪಟ್ಟಣದಲ್ಲಿ ಸರಿಯಾದ ವೇದಿಕೆ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಬೇಡ. ಶಾಲಾ ಮೈದಾನದಲ್ಲಿ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಪಟ್ಟಣದಲ್ಲಿ ಕಾಂiÀiðಕ್ರಮಗಳನ್ನು ನಡೆಸುವಾಗ ಪಟ್ಟಣದೆಲ್ಲೆಡೆ ಬೇಕಾಬಿಟ್ಟಿ ಫ್ಲೆಕ್ಸ್ಗಳನ್ನು ಹಾಕಿ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ತರಲಾಗುತ್ತಿದೆ. ಕಾರ್ಯಕ್ರಮ ಮುಗಿದ ನಂತರವೂ ತೆರುವುಗೊಳಿಸದೇ ಹಾಗೆಯೇ ಬಿಡುತ್ತಿರುವುದರಿಂದ ಪಟ್ಟಣದ ಅಂದ ಹಾಳಾಗುತ್ತಿದೆ. ಕಾರ್ಯಕ್ರಮ ಮುಗಿದ ಮೂರು ದಿನಗಳ ಒಳಗೆ ಫ್ಲೆಕ್ಸ್ ತೆಗೆಯುವಂತೆ ಅನುಮತಿ ನೀಡುವಾಗಲೇ ಆಯೋಜಕರಿಗೆ ತಿಳಿಸಬೇಕು ಮತ್ತು ಅವರಿಂದ ಹೆಚ್ಚಿನ ಠೇವಣಿ ಪಡೆದುಕೊಳ್ಳಬೇಕೆಂದು ಶೀಲಾ ಡಿಸೋಜಾ, ಶುಭಾಕರ, ಮೃತ್ಯುಂಜಯ ತಿಳಿಸಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ವಾಲ್ಮೀಕಿ ಭವನದ ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿದ್ದು, ತಕ್ಷಣ ಹದ್ದುಬಸ್ತು ಸರ್ವೆ ನಡೆಸಿ ಬೇಲಿ ಅಳವಡಿಸಬೇಕೆಂದು ಸದಸ್ಯ ಜೀವನ್ ಒತ್ತಾಯಿಸಿದರು. ಕಸ ವಿಲೇವಾರಿ ಸಮಸ್ಯೆ ಇಂದಿಗೂ ಜೀವಂತವಾಗಿದ್ದು, ತಕ್ಷಣ ಘಟಕದ ಕೆಲಸ ಆರಂಭಿಸಬೇಕೆAದು ಸದಸ್ಯರು ಒತ್ತಾಯಿಸಿದರು. ಬಸವೇಶ್ವರ ರಸ್ತೆಯಲ್ಲಿ ಅಂಗನವಾಡಿಗೆ ಜಾಗ ಗುರುತಿಸಿದ್ದು, ಶೀಘ್ರ ಕಾಮಗಾರಿ ಆರಂಭಿಸುವAತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚನೆ ನೀಡಬೇಕೆಂದು ಸದಸ್ಯ ಮೃತ್ಯುಂಜಯ ಅವರು ತಹಶೀಲ್ದಾರ್‌ರಲ್ಲಿ ಮನವಿ ಮಾಡಿದರು.

ವಾರ್ಡ್ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂದರ್ಭ ಸಂಬAಧಿಸಿದ ಸದಸ್ಯರಿಂದ ಬೇಡಿಕೆ ಪಟ್ಟಿಯನ್ನು ಪಡೆದುಕೊಳ್ಳಬೇಕು. ಅನುದಾನ ಲಭ್ಯತೆಯ ಆಧಾರದ ಮೇರೆ ಆದ್ಯತೆಯೊಂದಿಗೆ ಕಾಮಗಾರಿಗಳನ್ನು ನಿರ್ವಹಿಸಬೇಕು. ಅನುದಾನ ಕೊರತೆಯಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಆಡಳಿತಾಧಿಕಾರಿ ನವೀನ್‌ಕುಮಾರ್ ಅವರು ಸಂಬAಧಿಸಿದ ಅಭಿಯಂತರ ವಿಜಯ್‌ಕುಮಾರ್ ಮತ್ತು ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸೂಚಿಸಿದರು. ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಶೀಘ್ರವಾಗಿ ಕಾಮಗಾರಿ ಆರಂಭಿಸಲು ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಸದಸ್ಯರಾದ ಬಿ.ಆರ್. ಮಹೇಶ್, ನಾಗರತ್ನ, ಮೋಹಿನಿ, ಜಯಂತಿ ಶಿವಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.