ಶನಿವಾರಸಂತೆ, ಫೆ. ೨೦: ಸೋಮವಾರಪೇಟೆ ತಾಲೂಕು ಶಿಕ್ಷಣ ಇಲಾಖೆ ಹಾಗೂ ಶನಿವಾರಸಂತೆ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಶನಿವಾರಸಂತೆ ಹೋಬಳಿ ಮಟ್ಟದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಾಗಾರ ಕಾರ್ಯಕ್ರಮವನ್ನು ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಉದ್ಘಾಟಿಸಿದರು. ಹೋಬಳಿ ವ್ಯಾಪ್ತಿಯ ೯ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ಶಿಕ್ಷಕರಾಗಿ ರಾಷ್ಟç ಪ್ರಶಸ್ತಿ ವಿಜೇತ ಶಿಕ್ಷಕ ವಿಕ್ರಾಂತ್ ಕೇಳ್ಕರ್, ಗೌಡಳ್ಳಿ ಶಾಲೆಯ ದಿನೇಶ್, ಭಾರತಿ ವಿದ್ಯಾಸಂಸ್ಥೆಯ ಹೆಚ್.ಎನ್. ಮಂಗಳಾ ಹಾಗೂ ಕರುಣಾ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ಶಿಕ್ಷಕ ಹಾಗೂ ಚಿಂತಕ ಕುಶಾಲನಗರದ ಉ.ರಾ.ನಾಗೇಶ್ ಪ್ರೇರಣಾ ನುಡಿಗಳನ್ನಾಡಿ, ವಿದ್ಯಾರ್ಥಿಗಳ ಮನೋಸಾಮರ್ಥ್ಯವನ್ನು ವೃದ್ಧಿಸಿದರು. ವಿದ್ಯಾಸಂಸ್ಥೆ ಪ್ರಾಂಶುಪಾಲ ಫಾದರ್ ಸಬಾಸ್ಟಿನ್ ಮೈಕೆಲ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹೇಮಂತ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ರೋಟರಿ ಸಂಸ್ಥೆ ಅಧ್ಯಕ್ಷ ಎ.ಹೆಚ್.ಚಂದ್ರಕಾAತ್, ಪದಾಧಿಕಾರಿಗಳಾದ ದಿವಾಕರ್, ಟಿ.ಆರ್. ಪುರುಷೋತ್ತಮ್, ಕೆ.ಪಿ. ಜಯಕುಮಾರ್, ಅರವಿಂದ್, ಅಶೋಕ್, ಮೋಹನ್, ಮಧು ಇತರ ರೊಟೇರಿಯನ್‌ಗಳು, ಶಿಕ್ಷಕರು, ಹಾಜರಿದ್ದರು.