ಚೆಯ್ಯಂಡಾಣೆ, ಫೆ. ೨೦: ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡರೇಷನ್ ವತಿಯಿಂದ ಜಮ್ಮು ಕಾಶ್ಮೀರದ ಅಭಿನವ ಸಭಾಂಗಣದಲ್ಲಿ ನಡೆದ ಶಾಸ್ತಿçÃಯ ನೃತ್ಯ ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಭಾಗವಹಿಸಿದ ಯೆದ್ವಿಕ್ ೩ ಚಿನ್ನದ ಪದಕ ಪಡೆದು ಅಂರ‍್ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವೀರಾಜಪೇಟೆ ಕೆ. ಬೋಯಿಕೇರಿ ಗ್ರಾಮದ ಅಜಿತ್ ಹಾಗೂ ಶೋಬಿಕಾ ದಂಪತಿಯ ಪುತ್ರ ಆಗಿರುವ ಯೆದ್ವಿಕ್ ೩ ವರ್ಷದಿಂದ ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಸಂಸ್ಥೆಯ ಗುರುಗಳಾದ ವಿದುಷಿ ಹೇಮಾವತಿ ಕಾಂತ್‌ರಾಜ್ ಹಾಗೂ ಕಾವ್ಯಶ್ರೀ ಅವರ ಶಿಷ್ಯರಾಗಿದ್ದಾನೆ ಹಾಗೂ ಅರಮೇರಿ ಎಸ್.ಎಂ.ಎಸ್. ಶಾಲೆಯಲ್ಲಿ ೨ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.ವೀರಾಜಪೇಟೆ, ಫೆ. ೨೦: ಜಮ್ಮುವಿನಲ್ಲಿ ನಡೆದ ರಾಷ್ಟçಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂತ ಅನ್ನಮ್ಮ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಎಂ. ಶ್ರೀದೇವಿ ಹಾಗೂ ಕೂರ್ಗ್ ವ್ಯಾಲಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ದೇಚಮ್ಮ ಕಪಲ್ ಮತ್ತು ಗುಂಪು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಭೂತಾನಲ್ಲಿ ನಡೆಯುವ ಅಂರ‍್ರಾಷ್ಟಿçÃಯ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಕೆ. ಬೋಯಿಕೇರಿ ಗ್ರಾಮದ ಮುರುಗೇಶ್ ಮತ್ತು ತುಳಸಿ ಇವರ ಪುತ್ರಿ ಶ್ರೀದೇವಿ, ವೀರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟದ ನಿವಾಸಿ ದೀಪಕ್ ಮತ್ತು ಅನುರಾಧ ಅವರ ಪುತ್ರಿ ದೇಚಮ್ಮ ಈ ಇಬ್ಬರು ವಿದ್ಯಾರ್ಥಿಗಳು ವೀರಾಜಪೇಟೆಯ ಟೀಮ್ ಇಂಟುಫೀಸ್ ನೃತ್ಯ ಶಾಲೆಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದು ವಿಷ್ಣು ಅವರು ತರಬೇತಿ ನೀಡುತ್ತಿದ್ದಾರೆ.