ಪೊನ್ನಂಪೇಟೆ, ಫೆ. ೨೦: ಅರಣ್ಯ ಶಾಸ್ತç ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಹುದ್ದೆಯಲ್ಲಿ ಶೇ.೧೦೦ ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ, ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಮುಷ್ಕರ ೧೨ನೇ ದಿನಕ್ಕೆ ಕಾಲಿಟ್ಟಿದ್ದು, ಅಣಕು ಶವಯಾತ್ರೆ ಪ್ರದರ್ಶನದ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಹುದ್ದೆಗಳಿಗೆ ಅರಣ್ಯ ಶಾಸ್ತçವೇ ಕನಿಷ್ಟ ವಿದ್ಯಾರ್ಹತೆ ಆಗಬೇಕು. ಅರಣ್ಯ ಶಾಸ್ತç ಪದವೀಧರರಿಗೆ ಅರಣ್ಯ ಇಲಾಖೆ ಹುದ್ದೆಗಳ ನೇಮಕಾತಿಯಲ್ಲಿ ಇದ್ದ ಮೀಸಲಾತಿ ಕಡಿತ ಆದೇಶವನ್ನು ರದ್ದುಪಡಿಸಿ ಶೇ.೧೦೦ ರಷ್ಟು ಮೀಸಲಾತಿ ನೀಡಬೇಕು. ಅರಣ್ಯ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯಬೇಕೆಂಬ ಹೆಬ್ಬಯಕೆಯಿಂದ ನಾಲ್ಕು ವರ್ಷ ಬಿ. ಎಸ್ಸಿ ಅರಣ್ಯ ಶಾಸ್ತç ಪದವಿಯನ್ನು ಪಡೆದುಕೊಂಡ ನಮಗೆ ಸರ್ಕಾರ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಕೊಡದೇ ಇದ್ದರೆ, ಮುಂದೊAದು ದಿನ ಅರಣ್ಯ ಶಾಸ್ತç ಪದವಿ ವಿದ್ಯಾರ್ಥಿಗಳು ಮನನೊಂದು ತಮ್ಮ ಬದುಕನ್ನೇ ಕೊನೆಗೊಳಿಸಿಕೊಳ್ಳುವ ಪರಿಸ್ಥಿತಿ ಬರಬಹುದು, ಎನ್ನುವ ರೀತಿಯಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಲು ವಿದ್ಯಾರ್ಥಿಗಳು ಅಣಕು ಶವಯಾತ್ರೆ ಪ್ರದರ್ಶನ ಮಾಡಿ ತಮ್ಮ ಅಸಹಾಯಕತೆಯನ್ನ ವ್ಯಕ್ತಪಡಿಸಿದ್ದಾರೆ.