ಶನಿವಾರಸಂತೆ, ಫೆ. ೧೨: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಭಂಡಾರ ಗ್ರಾಮದಲ್ಲಿ ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿ ವತಿಯಿಂದ ಶ್ರೀ ಮಲ್ಲೇಶ್ವರ ಸ್ವಾಮಿ ವಿಗ್ರಹ ಪ್ರಾಣಪ್ರತಿಷ್ಠಾಪನಾ ಮಹೋತ್ಸವ ಹಾಗೂ ನೂತನ ದೇವಾಲಯ ಉದ್ಘಾಟನಾ ಸಮಾರಂಭ ಶ್ರದ್ಧಾಭಕ್ತಿಯಿಂದ ಹಾಗೂ ವಿಜೃಂಭಣೆಯಿAದ ಜರುಗಿ ಸಂಪನ್ನವಾಯಿತು.

ತಾ.೧೧ ರಂದು ಮಧ್ಯಾಹ್ನ ೪ ಗಂಟೆಯಿAದ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಿ ಗಂಗಾಪೂಜೆ, ಸಮಸ್ತ ಕಾಮದೇವ ಪೂಜೆ, ಆಲಯ ಪ್ರವೇಶ, ನಂದಾದೀಪ ದೀಪಾರಾಧನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ ಸಮಾರಾಧನೆ, ಹೃತ್ವಿಕ್ ಗ್ರಹಣ, ಪಾನಕ ರಕ್ಷಾ ಬಂಧನ, ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗವಾಯಿತು. ನಂತರ ಮೃತ್ಯಂಗ್ರಹಣ, ಅಂಕುರಾರೋಪಣ, ಪಂಚಗವ್ಯಾಭಿಷೇಕ, ಪುಣ್ಯತೀರ್ಥ, ಕಳಶಾಭಿಷೇಕ, ಷಡ್ವಶೋಧನ ಪೂಜೆ, ಜಲಾಧಿವಾಸ, ಮಹಾಮಂಗಳಾರತಿಯೊAದಿಗೆ ತೀರ್ಥ-ಪ್ರಸಾದ ವಿನಿಯೋಗವಾಯಿತು.

ಸಂಜೆ ೬ ಗಂಟೆಯಿAದ ಪ್ರವೇಶ ಬಲಿ, ರಾಕ್ಷೋಘ್ನ ಹೋಮ, ದೇವತಾ ವಾಸ್ತು, ಪುರುಷ ಪೂಜೆ, ಪ್ರಧಾನ ಹೋಮ, ದಿಕ್ಪಾಲರಿಗೆ ಬಲಿ, ಪರಿಯಜ್ಞೀಕರಣ, ಪ್ರತಿಮಾ ಶೋಧನಾ, ಧ್ವಜಸ್ಥಂಭ- ಬಲಿಪೀಠ ಸ್ಥಾಪನೆ, ಶಿವಯೋಗಿ ಮಂಟಪ ಪ್ರತಿಷ್ಠೆ, ನವಗ್ರಹ, ಮೃತ್ಯುಂಜಯ ಹೋಮ, ಏಕಾದಶಿ, ಏಕವಾರು ರುದ್ರಾದ್ವಾದಕಾದಿತ್ಯ, ಪುರುಷ ಚಂಡೇಶ್ವರ, ಅಷ್ಟ ಲಕ್ಷಿö್ಮÃ ಸಮೇತ ಹೋಮ, ನ್ಯಾಸವಿಧಾನ, ಪೀಠ ಸಂಸ್ಕಾರ ನಡೆಯಿತು.

ತಾ.೧೨ ರಂದು ಬೆಳಿಗ್ಗೆ ೪-೩೦ ರಿಂದ ಗಣಪತಿ ಪೂಜೆ, ಶ್ರೀ ಮಲ್ಲೇಶ್ವರ ಸ್ವಾಮಿ ವಿಗ್ರಹ ಪ್ರಾಣಪ್ರತಿಷ್ಠಾಪನೆ, ರುದ್ರಾಭಿಷೇಕ, ಕಳಾ ಹೋಮ, ಶ್ರೀರುದ್ರ ಹೋಮ, ಗ್ರಾಮ ದೇವತೆ, ಇಷ್ಟದೇವತಾ ಹೋಮ, ಜಯಾಧಿ ಮತ್ತು ಪ್ರಾಯಶ್ಚಿತ ಹೋಮ, ಅಷ್ಟೋತ್ತರ ಪೂಜೆಯೊಂದಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ಶಿಖರ ಕಳಸಾರೋಹಣವಾಯಿತು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಪೂರ್ಣಾಹುತಿ, ದೃಷ್ಟಿಪೂಜೆ, ಮಂತ್ರೋಪದೇಶ ನಡೆಯಿತು. ಮಹಾಮಂಗಳಾರತಿಯಾಗಿ ತೀರ್ಥ ಪ್ರಸಾದ ವಿನಿಯೋಗವಾಯಿತು.ಹಳೇಬೀಡಿನ ಪಂಡಿತ್ ಲಿಂಗರಾಜ ಶಾಸ್ತಿçಗಳು ಮತ್ತು ಸಂಗಡಿಗರು ಪೂಜಾ ವಿಧಿಗಳನ್ನು ನೆರವೇರಿಸಿದರು. ದೊಡ್ಡಭಂಡಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.