ಪ್ರತಿದಿನ ಬೆಳಿಗ್ಗೆ ೫.೩೦ ಗಂಟೆಗೆ ರಾಗ ಶಿವರಂಜಿನಿ ಮೂಲಕ ಆರಂಭಗೊಳ್ಳುವ ಆಧಾರಿತ ಯುರೋಪ್ ಮೂಲದ ಜೇವಿಷ್ ರೆಫ್ಯೂಜಿ ಮತ್ತು ವಾಲ್ಟರ್ ಕೌಫ್ ಮ್ಯಾನ್ ಅವರುಗಳ ಸಹಿ ಟ್ಯೂನ್ ಸಂಗೀತ ದಲ್ಲಿ ಆರಂಭಗೊAಡು ಒಂದು ಕಾಲಕ್ಕೆ ಆತ್ಮೀಯ ಸ್ನೇಹಿತ, ಮನೋರಂಜನೆಯ ಮೂಲ ಮತ್ತು ಬಹು ದೊಡ್ಡ ಪ್ರತಿಷ್ಠಿತ ಸಮೂಹ ಸಂವಹನ ಮಾಧ್ಯಮ ಎಂದು ಹೆಸರು ಪಡೆದುಕೊಂಡ ರೇಡಿಯೋ ಎಲ್ಲರ ಮನದಲ್ಲೂ ಇಂದಿಗೂ ಜೀವಂತ.

ಕಾಲಕಾಲಕ್ಕೆ ತಂತ್ರಜ್ಞಾನಗಳ ಬೆಳವಣಿಗೆಯಾಗುತ್ತಾ ಹೋದಂತೆ ಮಾಧ್ಯಮಗಳ ಸ್ವರೂಪಗಳೂ ಬದಲಾಗುತ್ತ ಹೋದವು . ಆದರೆ ಅಂದಿನಿAದ ಇಂದಿನವರೆಗೂ ರೇಡಿಯೋ ಮಾತ್ರ ಅಗ್ರಸ್ಥಾನದಲ್ಲಿದೆ. ಏಕೆಂದರೆ ಎಷ್ಟೋ ಜನರು ಅವರ ಬದುಕಿನುದ್ದಕ್ಕೂ ರೇಡಿಯೋದಲ್ಲಿ ಬರುವ ಸುದ್ದಿ ಮತ್ತು ಕಾರ್ಯಕ್ರಮಗಳಿಗೆ ಬೆರೆತು ಹೋಗಿದ್ದರು. ಆದರೆ ಇಂದು ತಂತ್ರಜ್ಞಾನಗಳ ಆವಿಷ್ಕಾರದಿಂದಾಗಿ ರೇಡಿಯೋ ಬಳಕೆ ಕಡಿಮೆಯಾಗಿದೆ. ಬದಲಾಗಿ ಸ್ಮಾರ್ಟ್ ಟಿವಿ, ಸ್ಮಾರ್ಟ್ಫೋನ್‌ಗಳು ತಲೆಯೆತ್ತಿವೆ . ಅವುಗಳಲ್ಲಿಯೂ ರೇಡಿಯೋ ತರಂಗಗಳ ಗೊಂಚಲುಗಳನ್ನು ಸಾಫ್ಟ್ವೇರ್ ಮೂಲಕ ಹಾಕಲಾಗಿರುತ್ತದೆ. ಹಾಗಾಗಿ ಇಂದು ಜಾಗತಿಕವಾಗಿ ಸಾಮೂಹಿಕ ಮಾಧ್ಯಮಗಳಲ್ಲಿ ರೇಡಿಯೋ ಅಗ್ರಸ್ಥಾನದಲ್ಲಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ರೇಡಿಯೋ ಪ್ರಬಲ ಸಂವಹನ ಸಾಧನವಾಗಿದೆ, ಸರ್ಕಾರದ ಸಂದೇಶಗಳನ್ನು ಸಾರ್ವಜನಿಕ ರಿಗೆ ತಲುಪಿಸಲು, ಜನರಿಗೆ ಜ್ಞಾನ ಶಿಕ್ಷಣ ಹಾಗೂ ಮನೋರಂಜನೆ ನೀಡಲು ವ್ಯಾಪಕವಾಗಿ ಬಳಸಲ್ಪಟ್ಟ ಮಾಧ್ಯಮವೆಂದರೆ ಅದು ರೇಡಿಯೋ. ಉದಾಹರಣೆಗೆ: ದೇಶದ ಘನತೆ ವೆತ್ತ ಪ್ರಧಾನಮಂತ್ರಿಗಳು ನಡೆಸುತ್ತಿರುವ "ಮನ್ ಕಿ ಬಾತ್" ರೇಡಿಯೋ ಕಾರ್ಯಕ್ರಮವು ೨೦೧೪ ರಿಂದ ಆರಂಭವಾಗಿದ್ದು ಭಾರತದ ಸಮಸ್ತ ನಾಗರಿಕರಿಗೆ ಪ್ರಧಾನಿಗಳ ಮಾತುಗಳು ಏಕಕಾಲಕ್ಕೆ ರೇಡಿಯೋ ಮೂಲಕ ತಲುಪು ತ್ತಿದೆ ಎಂದರೆ ರೇಡಿಯೋದ ಜಾಲ ಸಂಪರ್ಕ ವನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬಹು ದಾಗಿದೆ. ನೈಸರ್ಗಿಕ ವಿಕೋಪ, ನೆರೆ ಪ್ರವಾಹದಂತಹ ಸಮಯದಲ್ಲೂ ತುರ್ತು ಸಂವಹನಕ್ಕಾಗಿ ರೇಡಿಯೋ ಮಹತ್ವದ ಪಾತ್ರ ವಹಿಸಿದೆ.

ನಮ್ಮ ಕೊಡಗಿನಲ್ಲಿ ಎಲ್ಲರ ಮನೆಯಲ್ಲಿಯೂ ರೇಡಿಯೋಗೆ ಅಗ್ರಸ್ಥಾನ ಇದೆ ಎಂದರೆ ತಪ್ಪಲ್ಲ. ಇಂದು ಕೊಡಗಿನಲ್ಲಿ ಮುಂಜಾನೆ ಎದ್ದ ಕೂಡಲೇ ಮೊದಲಿಗೆ... ರೇಡಿಯೋ ಆನ್ ಮಾಡುವ ಪದ್ಧತಿ ಹಾಗೂ ಮನೆಯಲ್ಲಿ ತುಂಬಾ ವಯಸ್ಸಾದವರು ಸೇರಿದಂತೆ ಮನೆಯವರು ಕಾಫಿ ಕುಡಿಯುತ್ತ ರೇಡಿಯೋದಲ್ಲಿ ಬರುವ ನಿಧನ ಸುದ್ದಿ, ಪ್ರದೇಶ ಸಮಾಚಾರ, ರಾಷ್ಟಿçÃಯ ವಾರ್ತೆ, ಸ್ಥಳೀಯ ಸುದ್ದಿ ಸಮಾಚಾರ, ಸುದ್ದಿ ಜೊಂಪೆಗಳನ್ನು ಆಲಿಸಿ ನಂತರ ಬೇರೆ ಕೆಲಸದತ್ತ ವಾಲುವುದನ್ನು ಕಾಣಬಹುದು. ಆಯಾಯ ಸ್ಥಳಕ್ಕೆ ಅನುಗುಣವಾಗಿ ರೇಡಿಯೋ ಕೇಳುಗರಿಗೆ ಸ್ಥಳೀಯ ಭಾಷೆಗಳಲ್ಲಿಯೂ ಕಾರ್ಯಕ್ರಮ ರೂಪಿತಗೊಳ್ಳುತ್ತಿವೆ. ಉದಾಹರಣೆಯೆಂದರೆ ೧೦೩.೧ ತರಂಗದ ಮಡಿಕೇರಿ ಆಕಾಶವಾಣಿ ಕೇಂದ್ರದಿAದ ಕೊಡವ, ಅರೆಭಾಷೆ ಹಾಗೂ ಬ್ಯಾರಿ ಭಾಷೆಯಲ್ಲಿ ವಾರ್ತೆಗಳನ್ನು ಪ್ರಸಾರ ಮಾಡುತ್ತಿವೆ.. ಆಯಾ ಭಾಷೆ ಜನಾಂಗಕ್ಕೆ ಸಂಬAಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರುತ್ತವೆ, ಹೀಗೆ ಇನ್ನು ಹಲವಾರು ವಿಚಾರಧಾರೆಗಳ ಸಂದರ್ಶನಗಳು, ಇನ್ನಿತರ ಕಾರ್ಯಕ್ರಮಗಳು ಕೊಡಗಿನ ಜನರ ಮೆಚ್ಚುಗೆ ಪಡೆದಿವೆ.

೧೯೨೪ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕ್ಲಬ್ ಭಾರತದಲ್ಲಿ ರೇಡಿಯೋವನ್ನು ಮೊದಲು ಪರಿಚಯಿಸಿತು. ಕ್ಲಬ್ ರೇಡಿಯೋ ಪ್ರಸಾರದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿತು. ಕಾರಣಾಂತರಗಳಿAದ ೧೯೨೭ರಲ್ಲಿ ಮುಚ್ಚಿ. ಅದೇ ವರ್ಷ ೧೯೨೭ರಲ್ಲಿ ಕೆಲವು ಬಾಂಬೆ ಉದ್ಯಮಿಗಳು ಬಾಂಬೆ ಮತ್ತು ಕಲ್ಕತ್ತದಲ್ಲಿ ಭಾರತೀಯ ಬ್ರಾಡ್ ಕಾಸ್ಟಿಂಗ್ ಕಂಪನಿಯನ್ನು ಆರಂಭಿಸಿದರು . ಈ ಕಂಪನಿಯು ೧೯೩೦ರಲ್ಲಿ ಎಲ್ಲೆಡೆ ಹರಡಿ ನಂತರ ೧೯೩೨ ರಲ್ಲಿ ಭಾರತ ಸರ್ಕಾರವು ಸದರಿ ಕಂಪನಿಯನ್ನು ತನ್ನ ಹಿಡಿತಕ್ಕೆ ಪಡೆದುಕೊಂಡು ಭಾರತೀಯ ಪ್ರಸಾರ ಸೇವೆ ಎಂಬ ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸಿತು. ೧೯೩೬ ರಲ್ಲಿ ಅದರ ಹೆಸರನ್ನು ಆಲ್ ಇಂಡಿಯಾ ರೇಡಿಯೋ (ಂIಖ) ಎಂದು ಬದಲಾಯಿಸಲಾಯಿತು. ಆಲ್ ಇಂಡಿಯಾ ರೇಡಿಯೋ ಈ ಸೇವೆಯನ್ನು ಮುಂದಕ್ಕೆ ತೆಗೆದುಕೊಂಡು ದೇಶಾದ್ಯಂತ ರೇಡಿಯೋ ಪ್ರಸಾರಕ್ಕಾಗಿ ನಿಲ್ದಾಣಗಳನ್ನು ನಿರ್ಮಿಸಿತ್ತು. ಒಂದು ದೊಡ್ಡ ದೇಶಕ್ಕೆ ತನ್ನ ದೇಶದ ಮೂಲೆ ಮೂಲೆಗೂ ಇಷ್ಟು ದೊಡ್ಡ ರಾಷ್ಟಿçÃಯ ಸೇವೆಯನ್ನು ತಲುಪಿಸುವುದು ಕಷ್ಟಕರವಾಗಿತ್ತು. ಹಾಗಾಗಿ ಸ್ವಾತಂತ್ರ‍್ಯದ ನಂತರ ಆಲ್ ಇಂಡಿಯ ರೇಡಿಯೋ ತನ್ನದೇ ಎರಡು ವಿಭಾಗಗಳನ್ನು ಮಾಡಿತು. ೧೯೫೭ರಲ್ಲಿ ಆಲ್ ಇಂಡಿಯಾ ರೇಡಿಯೋ ಹೆಸರನ್ನು ಆಕಾಶವಾಣಿ ಎಂದು ಬದಲಾಯಿಸಲಾಯಿತು. ಆಕಾಶವಾಣಿ ಎಂದರೆ ‘‘ಆಕಾಶದಿಂದ ಬರುವ ಧ್ವನಿ’’ ಎಂದರ್ಥ. ಕೆಲವರು ರವೀಂದ್ರನಾಥ್ ಟ್ಯಾಗೋರ್ ಅವರು ರೇಡಿಯೋ ಪದಕ್ಕೆ ಆಕಾಶವಾಣಿ ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಸ್ವಾತಂತ್ರ‍್ಯದ ಸಮಯದಲ್ಲಿ ದೇಶದಲ್ಲಿ ಕೇವಲ ೬ ರೇಡಿಯೋ ಕೇಂದ್ರಗಳು ಮಾತ್ರ ಇದ್ದವು, ಆದರೆ ೯೦ರ ವೇಳೆಗೆ ರೇಡಿಯೋ ಜಾಲವು ದೇಶಾದ್ಯಂತ ಹರಡಿತು ಮತ್ತು ೧೪೬ ಂಒ ಕೇಂದ್ರಗಳನ್ನು ರಚಿಸಲಾಯಿತು. ರೇಡಿಯೋ ಕಾರ್ಯಕ್ರಮಗಳು ಇಂಗ್ಲೀಷ್, ಹಿಂದಿ ಪ್ರಾದೇಶಿಕ ಮತ್ತು ಸ್ಥಳೀಯ ಭಾಷೆಗಳಲ್ಲಿ ಬರುತ್ತಿದ್ದವು. ೧೯೬೭ ರಲ್ಲಿ ದೇಶದಲ್ಲಿ ವಾಣಿಜ್ಯ ರೇಡಿಯೋ ಸೇವೆ ಆರಂಭವಾಯಿತು. ೧೯೯೦ ರ ಮಧ್ಯದ ವೇಳೆಗೆ ದೇಶದಲ್ಲಿ ಪ್ರಸಾರ ಮಾಡಲು ೩೧ಂಒ ಮತ್ತು ಈಒ ಕೇಂದ್ರಗಳು ಸ್ಥಾಪಿತಗೊಂಡಿದ್ದವು. ೧೯೯೪ ರಲ್ಲಿ ದೇಶವನ್ನು ಸಂಪರ್ಕಿ ಸಲು ೮೫ ಈಒ ಮತ್ತು ೭೩ ತರಂಗ ಕೇಂದ್ರಗಳನ್ನು ರಚಿಸಲಾಗಿತ್ತು.

ಹೀಗೆ ವಿವಿಧ ಭಾರತೀಯ ರೇಡಿಯೋ ಅತ್ಯುತ್ತಮ ಸೇವೆಗಳಲ್ಲಿ ಒಂದಾಗಿದೆ, ವಿವಿಧ ಭಾರತಿ ಸುದ್ದಿಗಳು, ಚಲನಚಿತ್ರ ಸಂಗೀತ ಮತ್ತು ಹಾಸ್ಯ ಕಾರ್ಯಕ್ರಮಗಳನ್ನು ಒಳಗೊಂಡAತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇನ್ನು ಹಲವಾರು ಸೇವೆಗಳು ಕಾರ್ಯಕ್ರಮಗಳ ಮೂಲಕ ಮೂಡಿಬರುತ್ತವೆ, ಫೋನಿನಲ್ಲಿ ಸುದ್ದಿ ಸೇವೆ, ನೇರ ಮನೆಗೆ ಸೇವೆ, ಸಾಕ್ಷಾ ಚಿತ್ರ, ಕೇಂದ್ರ ನಾಟಕ ಘಟಕ ಇತ್ಯಾದಿ ಅಲ್ಲದೆ ರೈತರ ಕೃಷಿ ವಿಷಯ, ಹವಾಮಾನ, ದೇಶ ಮತ್ತು ವಿದೇಶಗಳಿಗೆ ಸಂಬAಧಿಸಿದAತೆ ವಿಷಯಗಳ ವಿವರವಾದ ಮಾಹಿತಿಯನ್ನು ಸುಲಭವಾಗಿ ದೇಶದ ಜನರನ್ನು ತಲುಪುವಂತೆ ಮಾಡುತ್ತಿವೆ. ನಮ್ಮ ಮೈಸೂರಿನಲ್ಲಿ ದೇಶದ ಮೊದಲ ಬಾನೂಲಿ ರೇಡಿಯೋ ಕೇಂದ್ರ ಸ್ಥಾಪನೆಯಾಗಿದ್ದು ಮೈಸೂರು ವಿಶ್ವವಿದ್ಯಾನಿಲಯ ಮನೋಶಾಸ್ತç ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎಂ. ವಿ. ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ರೇಡಿಯೋ ಕೇಂದ್ರ ವೊಂದನ್ನು ಸ್ಥಾಪಿಸಿದರು ಎನ್ನುವುದೇ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ.

ಹೀಗೆ ನಾನಾ ತರಹದ ತರಂಗಾAತರಗಳ ರೇಡಿಯೋ ಜನರ ಜೀವನಕ್ಕೆ ಜೊತೆಗೂಡಿವೆ. ಹಾಗಾಗಿ ಮಾಧ್ಯಮದ ಜನಪ್ರಿಯತೆಯನ್ನು ಜೀವಂತ ವಾಗಿರಿಸಲು ಮತ್ತು ಎಲ್ಲರ ನಡುವೆ ಅದರ ಬಳಕೆಯನ್ನು ಉತ್ತೇಜಿಸಲು ಪ್ರತಿವರ್ಷ ಫೆಬ್ರವರಿ ೧೩ರಂದು ವಿಶ್ವ ರೇಡಿಯೋ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ.

-ಈರಮಂಡ ಹರಿಣಿ ವಿಜಯ್

ಕೊಡಂಬೂರು,

ಮೊ: ೯೭೪೦೯೭೦೮೪೦