ಮಡಿಕೇರಿ, ಫೆ. ೧೨: ಸೋಮವಾರಪೇಟೆ ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಪದಾಧಿಕಾರಿಗಳನ್ನು ನೇಮಿಸಿ ಕಂದಾಯ ಇಲಾಖೆಯ ಪೀಠಾಧಿಕಾರಿ ಮುತ್ತುರಾಜು ಆದೇಶಿಸಿದ್ದಾರೆ.

ಅಧ್ಯಕ್ಷರಾಗಿ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಸದಸ್ಯರಾಗಿ ಸಾಮಾನ್ಯ ಕ್ಷೇತ್ರಕ್ಕೆ ತಾಕೇರಿಯ ಬಿ.ಬಿ. ಸತೀಶ್, ಎಸ್.ಸಿ., ಎಸ್.ಟಿ. ಮೀಸಲು ಸ್ಥಾನಕ್ಕೆ ಬ್ಯಾಡಗೊಟ್ಟದ ಜಿ.ಎಲ್. ಜನಾರ್ಧನ್, ಮಹಿಳಾ ಮೀಸಲಿನಿಂದ ಕುಸುಬೂರಿನ ಚಂದ್ರಿಕಾ ಕುಮಾರ್, ಸದಸ್ಯ ಕಾರ್ಯದರ್ಶಿ ತಾಲೂಕು ತಹಶೀಲ್ದಾರ್ ಅವರು ನೇಮಕಗೊಂಡಿದ್ದಾರೆ.