ಮಡಿಕೇರಿ, ಫೆ. ೧೨: ಪ್ರೀತಿ ವಿಶ್ವಾಸದಿಂದ ಉತ್ತಮವಾದ ಸಂಸ್ಥೆಯನ್ನು ಕಟ್ಟಬಹುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಹೇಳಿದರು. ಬೆಂಗಳೂರು ವಿಶ್ವವಿದ್ಯಾ ನಿಲಯದ ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ವಿ.ಬಿ. ಕುಟಿನೋ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಥೆಯ ಏಳಿಗೆಗೆ ಪೊ|| ಕುಟಿನೋ ಅವರ ಕೊಡುಗೆ ಅಪಾರವಾಗಿದೆ. ಸರ್ಕಾರದ ಸಂಸ್ಥೆಯಾದರೂ ಇಷ್ಟೊಂದು ದೊಡ್ಡ ಮಟ್ಟಿಗೆ ಬೆಳವಣಿಗೆಯಾಗಲು ಅವರ ಕೊಡುಗೆ ಅಪಾರವಾಗಿದೆ. ಈ ಸಂಸ್ಥೆಯ ಏಳಿಗೆ ಇನ್ನಷ್ಟು ಮಕ್ಕಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ, ನಮ್ಮ ನಮ್ಮ ಜಾಗದಲ್ಲಿದ್ದು ಸಹಕರಿಸಿ ಕೆಲಸ ಮಾಡಬೇಕು. ನಾನು ಲಾ-ಕಾಲೇಜಿ ನಿಂದ ಬಂದರೂ ಆ ಕಾಲೇಜಿನ ಮೇಲೆ ವಿಶೇಷವಾದ ಪ್ರೀತಿ ವಿಶ್ವಾಸ ಇದ್ದೇ ಇರುತ್ತದೆ. ಯಾವುದೇ ಕೆಲಸದಲ್ಲಿ ಇರಬಹುದು, ವಿದ್ಯಾರ್ಥಿ ಯಾಗಿರಬಹುದು ಪ್ರೀತಿ ವಿಶ್ವಾಸವೇ ಆ ಸಂಸ್ಥೆಯನ್ನು ಇಷ್ಟೊಂದು ದೊಡ್ಡದಾಗಿ ಬೆಳೆಸಲು ಸಾಧ್ಯ ವಾಗುತ್ತದೆ. ಇದನ್ನು ಉಳಿಸಿಕೊಳ್ಳು ವುದು ಹಾಗೂ ನಮ್ಮ ನಿರಂತರ ಬಾಂಧವ್ಯವನ್ನು ಬೆಳೆಸಿಕೊಂಡು ಈ ಸಂಸ್ಥೆಯನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಲು ಶ್ರಮಿಸಿದರೆ ಪ್ರೊ|| ಕುಟಿನೋ ಅವರಿಗೆ ಗುರುದಕ್ಷಿಣೆ ನೀಡಿದಂತಾಗು ತ್ತದೆ ಎಂದು ಭಾವಿಸುವದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ದಲ್ಲಿ ದೆಹಲಿ ಹೈಕೋರ್ಟ್ ನ್ಯಾಯಾಧೀಶ ರಾದ ಪ್ರತಿಭಾ ಎಂ ಸಿಂಗ್, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಗಳಾದ ಕೃಷ್ಣ ಎಸ್. ದೀಕ್ಷಿತ್, ಎಸ್.ಆರ್. ಕೃಷ್ಣಕುಮಾರ್, ರಂಗಸ್ವಾಮಿ ನಟರಾಜ್ ಹಾಗೂ ಸಿಕ್ಕಿಂನ ಅಡ್ವಕೇಟ್ ಜನರಲ್ ಬಸವಪ್ರಭು ಎಸ್. ಪಾಟೀಲ್ ಹಾಗೂ ಇತರ ಗಣ್ಯರು ಸಮಾರಂಭ ದಲ್ಲಿ ಉಪಸ್ಥಿತರಿದ್ದರು.