*ಸಿದ್ದಾಪುರ, ಫೆ. ೧೨ : ಸಿದ್ದಾಪುರ ವಲಯ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸಭೆಯು ಅಧ್ಯಕ್ಷರಾದ ಕೆ.ಜಿ. ಕರ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಿದ್ದಾಪುರ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಜಯೇಂದ್ರ ಮತ್ತು ವೀರಾಜಪೇಟೆ ತಾಲೂಕು ಬ್ಲಾಕ್ ಅಧ್ಯಕ್ಷ ಮಹಾದೇವು ಅವರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಎಂ.ಎ. ಯಮುನಾ, ಪರಶುರಾಮ, ನಾಗರಾಜು, ಕಾರ್ಯದರ್ಶಿ ಯಾಗಿ ಹೆಚ್.ಎಸ್. ಸಂತೋಷ್, ಸಹ ಕಾರ್ಯದರ್ಶಿಯಾಗಿ ರಮೇಶ್, ನಿತೀಶ್ ಆಯ್ಕೆಯಾದರು.

ಖಜಾಂಚಿಯಾಗಿ ನಾಗರಾಜ್ ಆಯ್ಕೆಯಾಗಿದ್ದು, ಸದಸ್ಯರುಗಳಾಗಿ ಆರ್. ಸುಬ್ರಮಣಿ, ರಂಗನಾಥ್, ಕುಶಾಲಪ್ಪ, ಪೂವಣ್ಣ, ಮಣಿ, ಪೂವಯ್ಯ, ಮಂಜು, ಚಂದ್ರು, ಮಂಜುನಾಥ್, ರಾಜೇಶ್ವರಿ, ರಾಜ, ಚೆಲುವಯ್ಯ, ವಿನು, ಅನೀಶ್, ಶಿವಪ್ಪ, ಶುಭ, ವಿಶ್ವನಾಥ್, ಸುರೇಶ್, ಮಹೇಂದ್ರ, ಲತಾ, ರಾಜೇಶ್ ಅವರನ್ನು ನೇಮಕ ಮಾಡಲಾಯಿತು.