ಮುಳ್ಳೂರು, ಫೆ. ೧೨: ಸಮೀಪದ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ ವತಿಯಿಂದ ಸಂಗಯ್ಯನಪುರ ಗ್ರಾಮದಲ್ಲಿರುವ ಅರೆಭಾಷೆ ಗೌಡ ಸಮಾಜ ಸಭಾಂಗಣದಲ್ಲಿ ‘ಕೆಡ್ಡಸ’ ಸಾಂಪ್ರದಾಯಕ ಹಬ್ಬವನ್ನು ಆಚರಿಸಲಾಯಿತು.

ಕೆಡ್ಡಸ ಹಬ್ಬವನ್ನು ಅರೆಭಾಷೆ ಗೌಡ ಸಮೂದಾಯ ಸೇರಿದಂತೆ ಇತರೆ ಸಮುದಾಯದವರು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಮನುಷ್ಯ ಭೂಮಿಯಲ್ಲಿ ಜನಿಸಿ ಜೀವನ ನಡೆಸಿ ಭೂಮಿಯಲ್ಲೆ ಅಂತ್ಯವಾಗುತ್ತಾನೆ. ಭೂಮಿಯನ್ನು ತಾಯಿಗೆ ಹೋಲಿಕೆ ಮಾಡುತ್ತಾರೆ. ಆದರೆ ಭೂಮಿಗೆ ಯಾರು ಸಹ ವಿಶೇಷವಾಗಿ ಪೂಜಿಸುವುದಿಲ್ಲ ಈ ಹಿನ್ನೆಲೆಯಲ್ಲಿ ಅರೆಭಾಷೆ ಗೌಡ ಸಮುದಾಯ ಸೇರಿದಂತೆ ಇತರ ಕೆಲವೊಂದು ಸಮುದಾಯದವರು ಭೂ ತಾಯಿಯ ದಿನವನ್ನಾಗಿಯೂ ಮತ್ತು ಭೂಮಿಯನ್ನು ಶುದ್ಧಗೊಳಿಸುವ ದಿನವನ್ನು ಕೆಡ್ಡಸ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ.

ಪಂಚಾAಗದ ಪ್ರಕಾರದಂತೆ ಕೆಡ್ಡಸವು ಪ್ರತಿವರ್ಷ ತಾ. ೯ ರಿಂದ ೧೨ ಈ ದಿನಾಂಕಗಳ ನಡುವೆ ಬರುತ್ತದೆ ಸೋಮವಾರ ನಡೆದ ಕೆಡ್ಡಸ ಹಬ್ಬದ ಹಿನ್ನೆಲೆಯಲ್ಲಿ ಅರೆಭಾಷೆ ಗೌಡ ಸಮುದಾಯದ ಮನೆಗಳಲ್ಲಿ ಬೆಳಿಗ್ಗೆ ಮನೆ ಅಂಗಳವನ್ನು ಸಗಣಿಯಿಂದ ಸಾರಿಸಿ, ಕಳಸವನ್ನಿಟ್ಟು, ಮಾವಿನ ಎಲೆಗಳನ್ನಿಟ್ಟು ಅದರ ಮೇಲೆ ಹಣತೆ ಹಚ್ಚಿ ಭೂಮಿಗೆ ಎಣ್ಣೆ ಹಚ್ಚಿ ಪುಟ್ಟ ಕನ್ನಡಿ, ಬಾಚಣಿಗೆ, ಮಹಿಳೆಯರ ಶೃಂಗಾರ ಪರಿಕರಗಳನ್ನಿಟ್ಟು ತದನಂತರ ಸಾಂಪ್ರದಾಯದAತೆ ಭೂ ತಾಯಿಯನ್ನು ಪೂಜಿಸಿದರು.

ಈ ಸಂದರ್ಭ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಉಪಾಧ್ಯಕ್ಷ ಭಟ್ಯನ ಈರಪ್ಪ, ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್, ಪರ್ಲಕೋಟಿ ಸತೀಶ್, ಎಡಿಕೇರಿ ಜಯರಾಮ್, ಪರ್ಲಕೋಟಿ ಶೈಲಾ ಸತೀಶ್, ತೊತ್ತಿಯನ ತಾರಮಣಿ, ಎಡಿಕೇರಿ ಲೀಲಾವತಿ, ಪಟ್ಟಡ ಲೀಲಾಕುಮಾರ್, ಕುಯ್ಯಮುಡಿ ಗಣೇಶ್ ಮುಂತಾದವರು ಹಾಜರಿದ್ದರು.