ಮಡಿಕೇರಿ, ಫೆ. ೧೨ : ೨೦೧೮ರಲ್ಲಿ ಸುರಿದ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ ಮರುನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಳ್ಳದೆ ಜನ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಅಪೂರ್ಣಗೊಂಡ ಸೇತುವೆಗೆ ಮರದ ಪಾಲ ನಿರ್ಮಿಸಿಕೊಂಡು ಜನ ಸಂಚರಿ ಸುತ್ತಿದ್ದು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜನ ಸುತ್ತಿಬಳಸಿ ಓಡಾಡಬೇಕಾದ ಪ್ರಮೇಯ ಉಂಟಾಗಿದೆ.

ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಬಾರಿಬೆಳ್ಳಚ್ಚು ಎಂಬ ಸ್ಥಳದಲ್ಲಿ ೨೦ ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ೨೦೧೮ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಕುಸಿದು ಬಿದ್ದಿತ್ತು. ನಂತರ ಕೊಡಗು ಜಿಲ್ಲಾ ಪಂಚಾಯಿತಿಯ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ನಬಾರ್ಡ್ ಆರ್.ಐ.ಡಿ.ಎಫ್. ೨೪ ಲೆಕ್ಕ ಶೀರ್ಷಿಕೆಯಡಿ ಒಟ್ಟು ರೂ. ೩೦ ಲಕ್ಷ ವೆಚ್ಚದಲ್ಲಿ ಯೋಜನೆಯನ್ನು ೨೫-೩-೨೦೨೧ ರಂದು ಕೈಗೆತ್ತಿಕೊಂಡು ಕಾಮಗಾರಿ ಆರಂಭಿಸಲಾಯಿತು. ೨೦-೪-೨೦೨೩ ರೊಳಗೆ ಮುಕ್ತಾಯದ ಗಡುವು ಕೂಡ ನೀಡಲಾಗಿತ್ತು. ಆದರೆ, ಸಮರ್ಪಕವಾಗಿ ಅನುದಾನ ಬಿಡುಗಡೆಯಾಗದೆ ಸೇತುವೆ ಅರೆಬರೆ ಸ್ಥಿತಿಯಲ್ಲಿದೆ.

೨೮ ಮೀಟರ್ ಉದ್ದ, ೪.೫ ಮೀಟರ್ ಅಗಲ ವಿಸ್ತಿçÃರ್ಣದ ಈ ಸೇತುವೆ ನಿರ್ಮಾಣವಾದರೆ ಸುತ್ತಿಬಳಸಿ ಓಡಾಡುವ ಕಷ್ಟ ನೀಗಲಿದೆ. ಅಲ್ಲದೆ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಕಾರ್ಮಿಕರು, ಜನರಿಗೆ ವರದಾನವಾಗಲಿದೆ.

ಅನುದಾನ ಕೊರತೆv

ಕಾಲೂರು-ಬಾರಿಬೆಳ್ಳಚ್ಚು-ದೇವಸ್ತೂರು ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ರೂ. ೩೦ ಲಕ್ಷ ವೆಚ್ಚದ ಈ ಯೋಜನೆಗೆ ಹೆಚ್ಚುವರಿಯಾಗಿ ತಗುಲಿದ ರೂ. ೧೦ ಲಕ್ಷ ಅನುದಾನ ಕೈಸೇರದ ಪರಿಣಾಮ ಯೋಜನೆ ಸ್ಥಗಿತಗೊಂಡಿದೆ.

ರೂ. ೩೦ ಲಕ್ಷ ವೆಚ್ಚದ ಸೇತುವೆ ಕಾಮಗಾರಿ ಬಹುತೇಕ ಮುಗಿದಿದ್ದು, ಹೆಚ್ಚುವರಿಯಾಗಿ ರೂ. ೧೦ ಲಕ್ಷ ವೆಚ್ಚದ ಕೆಲಸದ ಪೈಕಿ ರೂ. ೩.೫೮ ಲಕ್ಷದ ‘ಪಾರ್ಟ್ ಬಿಲ್’ಗೆ ಪ್ರಸ್ತಾವನೆಯನ್ನು ಇಲಾಖೆ ಮೂಲಕ ಸರಕಾರಕ್ಕೆ ಕಳುಹಿಸ ಲಾಗಿದೆ. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಹಣ ಇಲ್ಲದೆ ಕೆಲಸ ಮಾಡಲಾಗುವುದಿಲ್ಲ. ಈಗಾಗಲೇ ಬಹುತೇಕ ಕೆಲಸಗಳು ಮುಕ್ತಾಯಗೊಂಡಿವೆ. ತಡೆಗೋಡೆ ನಿರ್ಮಾಣ ಹಾಗೂ ಸ್ಲಾö್ಯಬ್ ಅಳವಡಿಕೆ ಮಾಡಬೇಕಾಗಿದ್ದು, ಹಣ ಬಿಡುಗಡೆಯಾದರೆ ತ್ವರಿತವಾಗಿ ಕೆಲಸ ಮುಗಿಯಲಿದೆ ಎಂದು ಗುತ್ತಿಗೆದಾರ ಸಿದ್ದೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಅಸಮಾಧಾನ

ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಈ ಸಂಬAಧ ಕ್ರಮಕೈಗೊಳ್ಳಬೇಕು. ಸೇತುವೆಗೆ ಪಾಲ ಕಟ್ಟಿಕೊಂಡು ಜನ ಓಡಾಡುತ್ತಿದ್ದಾರೆ. ಈ ಸೇತುವೆ ನಿರ್ಮಾಣವಾದರೆ ೨.೫ ಕಿ.ಮೀ. ಅಂತರದಿAದ ೧ ಕಿ.ಮೀ.ಗೆ ತಗ್ಗಲಿದೆ. ನಿತ್ಯ ಅಂಗನವಾಡಿ, ಶಾಲೆಗೆ ಮಕ್ಕಳು ಅಪೂರ್ಣಗೊಂಡ ಸೇತುವೆ ಮೂಲಕವೇ ತೆರಳುತ್ತಿದ್ದಾರೆ. ಶೀಘ್ರವಾಗಿ ಕೆಲಸ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಟಿ ಹೆಚ್.ಜೆ. ರಾಕೇಶ್