ಮಡಿಕೇರಿ, ಫೆ. ೧೨: ಸಾಕಷ್ಟು ಕುತೂಹಲ ಕೆರಳಿಸಿರುವ ಕೊಡಗು ಜಿಲ್ಲೆಗೆ ಸಂಬAಧಿಸಿದAತಿರುವ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಇದೀಗ ಬಹುತೇಕ ಅಂತಿಮ ಹಂತದತ್ತ ತಲುಪಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಎರಡು ಅಕಾಡೆಮಿಗಳಿಗೆ ತಲಾ ಮೂರು ಹೆಸರನ್ನು ಅಂತಿಮಗೊಳಿಸಲಾಗಿದ್ದು, ಇವರುಗಳಲ್ಲಿ ಇಬ್ಬರು ಅವಕಾಶ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ.

ಈಗಾಗಲೇ ಈ ಪಟ್ಟಿ ಸಂಬAಧಿಸಿದ ಇಲಾಖಾ ಸಚಿವರ ಕೈ ಸೇರಿದ್ದು, ಸಚಿವರು ಸರಕಾರದೊಂದಿಗೆ ವ್ಯವಹರಿಸಿ ಸದ್ಯದಲ್ಲೇ ಅಧ್ಯಕ್ಷರ ಹೆಸರನ್ನು ಪ್ರಕಟ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಕೊಡವ ಅಕಾಡೆಮಿಗೆ ಸಂಬAಧಿಸಿದAತೆ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸೇರಿದ್ದು, ಸಚಿವರು ಸರಕಾರದೊಂದಿಗೆ ವ್ಯವಹರಿಸಿ ಸದ್ಯದಲ್ಲೇ ಅಧ್ಯಕ್ಷರ ಹೆಸರನ್ನು ಪ್ರಕಟ ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಕೊಡವ ಅಕಾಡೆಮಿಗೆ ಸಂಬAಧಿಸಿದAತೆ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಚರ್ಚೆಯಲ್ಲಿದೆಯಾದರೂ, ಇದು ತೂಗುಯ್ಯಾಲೆಯಲ್ಲಿದೆ ಎನ್ನಲಾಗಿದೆ. ಈ ತನಕ ಇವರ ಹೆಸರೂ ಪ್ರಬಲವಾಗಿ ಕೇಳಿಬಂದಿತ್ತು.

ಜಿಲ್ಲೆಯಿಂದ ಇದೀಗ ಮೂವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಈ ಮೂರು

(ಮೊದಲ ಪುಟದಿಂದ) ಹೆಸರಿನ ಪೈಕಿ ಅಕಾಡೆಮಿಗೆ ಇದೀಗ ಇಬ್ಬರ ಹೆಸರು ಅಂತಿಮ ಮಾಡಲಾಗಿದ್ದು, ಇಬ್ಬರು ಮಹೇಶ್ ಹಾಗೂ ಮೈನಾ ಸ್ಪರ್ಧೆಯಲ್ಲಿದ್ದಾರೆ. ಅಯ್ಯಪ್ಪ ಪರ ಹಲವರ ಒಲವಿದ್ದು, ಆಯ್ಕೆ ಕುತೂಹಲದಲ್ಲಿದೆ. ಕೊಡವ ಅಕಾಡೆಮಿಯಲ್ಲಿ ಮಹೇಶ್ ನಾಚಯ್ಯ ಅವರಿಗೆ ಮಣೆ ಹಾಕುವ ಸಂಭವ ಹೆಚ್ಚಿದೆ ಎನ್ನಲಾಗುತ್ತಿದೆ. ಇನ್ನು ಅರೆಭಾಷೆ ಅಕಾಡೆಮಿಗೆ ಸಂಬAಧಿಸಿದAತೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಸಂಚಾಲಕರಾಗಿರುವ ಸೂರಜ್ ಹೊಸೂರು, ಅಕಾಡೆಮಿಯ ಮಾಜಿ ಸದಸ್ಯ ಮಂದ್ರೀರ ಮೋಹನ್‌ದಾಸ್ ಹಾಗೂ ಬೇಕಲ್ ರಮಾನಾಥ್ ಅವರುಗಳ ಹೆಸರು ಅಂತಿಮ ಪಟ್ಟಿಯಲ್ಲಿದೆ. ಈ ಮೂವರಲ್ಲಿಯೂ ಇಬ್ಬರ ಹೆಸರು ಕೊನೆಯ ಚರ್ಚೆಯಲ್ಲಿದ್ದು, ಒಬ್ಬರಿಗೆ ಅಧ್ಯಕ್ಷ ಸ್ಥಾನ ಖಚಿತವೆನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಈಗಿನ ಸರಕಾರದಲ್ಲಿ ಪ್ರಾತಿನಿಧ್ಯ ಕಡಿಮೆಯಿದೆ ಎಂಬ ವಾದವೂ ಇದೆ.

ಕಳೆದ ಅವಧಿಯ ಅಧ್ಯಕ್ಷ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಗೆ ಇತ್ತಾದರೂ ಈ ಬಾರಿಯೂ ಒತ್ತಾಯವಿದೆ. ಈ ನಡುವೆ ಡಿ.ಸಿ.ಎಂ. ಅವರ ನಿಲುವೂ ಕೂಡ ಇದೇ ತರನಾಗಿದೆ ಎನ್ನಲಾಗಿದ್ದು, ಅಲ್ಲಿನ ಸದಾನಂದ ಮಾವಾಜಿ ಅವರ ಹೆಸರು ಒಂದಷ್ಟು ಪ್ರಚಲಿತದಲ್ಲಿದೆ. ಆದರೆ, ‘ಶಕ್ತಿ’ಗೆ ತಿಳಿದು ಬಂದಿರುವAತೆ ಎರಡು ಅಕಾಡೆಮಿಗಳಿಗೆ ಸದ್ಯಕ್ಕೆ ಅಂತಿಮಗೊಳಿಸಿರುವ ತಲಾ ಮೂವರ ಪೈಕಿ ಒಬ್ಬರು ಅಧ್ಯಕ್ಷರಾಗುವುದು ಖಚಿತ ಎಂಬುದು ಈಗಿನ ಬೆಳವಣಿಗೆ. ಎರಡೂ ಅಕಾಡೆಮಿಗಳಿಗೆ ಸಾಕಷ್ಟು ಮಂದಿ ಆಸಕ್ತರಾಗಿದ್ದರೂ ಇದೀಗ ಆಯ್ಕೆ ವಿಚಾರ ಬಹುತೇಕ ‘ಫೈನಲ್’ ಹಂತದಲ್ಲಿದೆ.