ಮಡಿಕೇರಿ, ಫೆ. ೮: ಬಸ್ನಲ್ಲಿ ಬಿದ್ದು ಸಿಕ್ಕ ನಗದು, ಅಗತ್ಯ ದಾಖಲೆಗಳಿದ್ದ ಪರ್ಸ್ ಅನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿ ಕಂಡಕ್ಟರ್ ಕೆ.ಆರ್. ಪ್ರಸನ್ನ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಡಿಕೇರಿಯಿಂದ ಭಾಗಮಂಡಲಕ್ಕೆ ಅನಂತೇಶ್ವರ ಬಸ್ನಲ್ಲಿ ತೆರಳುವಾಗ ಪ್ರಯಾಣಿಕರೊಬ್ಬರು ತಮ್ಮ ಅಗತ್ಯ ದಾಖಲೆ ಹಾಗೂ ನಗದು ಇದ್ದ ಪರ್ಸನ್ನು ಕಳೆದುಕೊಂಡಿದ್ದಾರೆ. ನಂತರ ಬಸ್ನಲ್ಲಿ ಕೆಲಸ ಮಾಡುವ ತಮ್ಮ ಸ್ನೇಹಿತರಿಗೆ ವಿಷಯ ತಿಳಿಸಿ ಹುಡುಕುವಂತೆ ಮನವಿ ಮಾಡಿದ್ದಾರೆ. ಅವರು ಅನಂತೇಶ್ವರ ಬಸ್ನ ನಿರ್ವಾಹಕ ಕೆ.ಆರ್. ಪ್ರಸನ್ನ ಅವರಿಗೆ ಕರೆ ಮಾಡಿ ಪರಿಶೀಲಿಸುವಂತೆ ತಿಳಿಸಿದ್ದು, ನಂತರ ಹುಡುಕಾಟ ನಡೆಸಿದಾಗ ಪರ್ಸ್ ದೊರೆತಿದೆ. ಅನಂತರ ಕಳೆದುಕೊಂಡವರಿಗೆ ಮಡಿಕೇರಿಯಲ್ಲಿ ಕೆ.ಆರ್. ಪ್ರಸನ್ನ ಪರ್ಸ್ ಹಿಂತಿರುಗಿಸಿದ್ದಾರೆ.