ಕೂಡಿಗೆ, ಫೆ. ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟಿಷ್ ಕಾಲದಲ್ಲಿ ಆರಂಭಗೊAಡಿರುವ ಗೋ ಸದನ ಮತ್ತು ಅದಕ್ಕೆ ಸಂಬAಧಿಸಿದ ಜಾಗದ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಲು ಕಂದಾಯ ಇಲಾಖೆಯ ಮುಖೇನ ಜಂಟಿಯಾಗಿ ಮೂರು ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆಯುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಸೂಚಿಸಿದ್ದಾರೆ.

ಹುದುಗೂರು, ಮಾವಿನಹಳ್ಳ, ಕಾಳಿದೇವನ ಹೊಸೂರು, ಗ್ರಾಮಸ್ಥರು, ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಸದಸ್ಯರು ಶಾಸಕರನ್ನು ಭೇಟಿ ಮಾಡಿ ಗ್ರಾಮದಲ್ಲಿರುವ ಪ್ರಮಖವಾದ ಗೋ ಸದನದ ಅಹವಾಲನ್ನು ಶಾಸಕರ ಗಮನಕ್ಕೆ ತಂದು ಅತಿ ಶೀಘ್ರವಾಗಿ ಅರಣ್ಯ ಇಲಾಖೆಗೆ ಜಾಗ ವರ್ಗಾವಣೆಗೊಂಡಿರುವುದನ್ನು ಮತ್ತು ಗೋ ಸದನದ ಜಾಗ ಹಾಗೂ ಪಶುಪಾಲನೆ ಇಲಾಖೆಗೆ ಸೇರಿದ ಪಶುವೈದ್ಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ವಿಚಾರಗಳನ್ನು ಚರ್ಚಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಗಮನ ಸೆಳೆಯಿತು. ಮಡಿಕೇರಿ ಕ್ಷೇತ್ರದ ಶಾಸಕರು ಕಂದಾಯ ಇಲಾಖೆ, ಅರಣ್ಯ, ಪಶುಪಾಲನಾ ಇಲಾಖೆ, ಸೇರಿದಂತೆ ಜಂಟಿಯಾಗಿ ಗ್ರಾಮಸ್ಥರ ಸಮ್ಮುಖದಲ್ಲಿ, ಶಾಸಕರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.