ಗೋಣಿಕೊಪ್ಪ ವರದಿ, ಫೆ. ೭: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ರಾಜ್ಯ ಪ್ರಶಸ್ತಿಗೆ ಭಾಜನರಾದ ನಾಲ್ವರು ಪತ್ರಕರ್ತರು ಗೋಣಿಕೊಪ್ಪ ವರದಿ, ಫೆ. ೭: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ರಾಜ್ಯ ಪ್ರಶಸ್ತಿಗೆ ಭಾಜನರಾದ ನಾಲ್ವರು ಪತ್ರಕರ್ತರು ಅನು ಕಾರ್ಯಪ್ಪ, ಪಿ.ವಿ. ಅಕ್ಷಯ್, ಪಂಜೇರೀರ ಜಗದೀಶ್ ಬೆಳ್ಯಪ್ಪ ಸ್ವೀಕರಿಸಿದರು. ಪ್ರತಿನಿಧಿ ಪತ್ರಿಕೆ ಜಿಲ್ಲಾ ವರದಿಗಾರ ಸಣ್ಣುವಂಡ ಕಿಶೋರ್ ನಾಚಪ್ಪ ಅವರ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟ ಗೊಂಡಿದ್ದ ‘ಕಳತ್ಮಾಡಿನಲ್ಲಿ ಮದ್ಯ ಮಾರಾಟವಿಲ್ಲ’ ಎಂಬ ವರದಿಗೆ ಭಾಜನವಾಗಿದ್ದ ಜಿ. ನಾರಾಯಣ ಸ್ವಾಮಿ ಅವರ ಅತ್ಯುತ್ತಮ ಗ್ರಾಮಾಂತರ ವರದಿಗೆ ಪ್ರಶಸ್ತಿ ಸ್ವೀಕರಿಸಿದರು. ರಿಪಬ್ಲಿಕ್ ಕನ್ನಡ ಟಿವಿ ಕೊಡಗು ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಅವರ ತಲೆಗೆ ಗುಂಡು ಬಿದ್ದರೂ ಬದುಕಿ ಬಂದ ಶೌರ್ಯ, ಶೌರ್ಯಚಕ್ರ ವಿಜೇತ ಮಹೇಶ್ ವರದಿ ಸಣ್ಣುವಂಡ ಶ್ರೀನಿವಾಸ್ ಚೆಂಗಪ್ಪ ಜ್ಞಾಪಕಾರ್ಥ ಅತ್ಯುತ್ತಮ ಸೇನಾ ವರದಿ ಪ್ರಶಸ್ತಿ, ಸ್ಟಾರ್ ಆಫ್ ಮೈಸೂರು ವರದಿಗಾರ ಪಿ.ವಿ. ಅಕ್ಷಯ್ ಅವರ ಪ್ರಾಜೆಕ್ಟ್ ಚೀತಾ ಕೋರ್ ತಂಡದಲ್ಲಿ ಕೊಡಗಿನ ವನ್ಯಜೀವಶಾಸ್ತçಜ್ಞ ವರದಿಯ ಕೆ.ಎನ್. ಸುಬ್ರಮಣ್ಯ ಪ್ರಶಸ್ತಿ, ಟಿವಿ ಮಾಧ್ಯಮಕ್ಕೆ ನೀಡುವ ರವಿ ಬೆಳಗೆರೆ ಪ್ರಶಸ್ತಿಗೆ ಟಿವಿ೯ ಪಂಜೇರೀರ ಜಗದೀಶ್ ಬೆಳ್ಯಪ್ಪ ಸ್ವೀಕರಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸೇರಿದಂತೆ ಪ್ರಮುಖರು ಹಸ್ತಾಂತರ ಮಾಡಿದರು.