ಮಡಿಕೇರಿ, ಫೆ. ೭: ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನದ ಗೋಕರ್ಣ ಶ್ರೀರಾಮಚಂದ್ರಪುರ ಮಠ ಮುಳ್ಳೇರಿಯ ಮಂಡಲ ಕೊಡಗು ವಲಯದ ನೂತನ ಪದಾಧಿಕಾರಿಗಳ ಪದಗ್ರಹಣವು ಇತ್ತೀಚೆಗೆ ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಅವರ ಸಮ್ಮುಖದಲ್ಲಿ ನೆರವೇರಿತು. ನೂತನ ಪದಾಧಿಕಾರಿಗಳಾಗಿ ಈ ಕೆಳಗಿನ ತಂಡವನ್ನು ನಿಯೋಜಿಸಲಾಯಿತು.

ಅಧ್ಯಕ್ಷರಾಗಿ ಸುಬ್ರಮಣ್ಯ ಕುಮಾರ್ ಎಂ.ಕೆ, ಉಪಾಧ್ಯಕ್ಷರಾಗಿ ಉದಯಕುಮಾರ್ ಹುಲಿತಾಳ, ಕಾರ್ಯದರ್ಶಿಯಾಗಿ ಶ್ರೀಪತಿ ಸಿ.ಕೆ, ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್ ಕಾನ, ಲಕ್ಷಿö್ಮ ವಿಭಾಗದಲ್ಲಿ ವಿ. ವನಮಾಲ ಭಟ್, ವೈದಿಕ ವಿಭಾಗದಲ್ಲಿ ಸಂತೋಷ್ ಭಟ್, ಮಾತೃ ವಿಭಾಗದಲ್ಲಿ ಸಾವಿತ್ರಿ ಪಾಲಂಗಾಲ, ಸೇವಾ ವಿಭಾಗದಲ್ಲಿ ಉದಯಕುಮಾರ್ ಕೆ.ಎಸ್, ಶಿಷ್ಯ ಮಾಧ್ಯಮ ವಿಭಾಗದಲ್ಲಿ ಕವಿತ ವಿ.ರಾಮ್, ವಿದ್ಯಾರ್ಥಿ ಮತ್ತು ಯುವತಿ ವಿಭಾಗದಲ್ಲಿ ಡಾ. ಅದಿತಿ ಪುರುಷೋತ್ತಮ, ಯುವ ವಿಭಾಗದಲ್ಲಿ ರಾಮಕೃಷ್ಣ ಭಟ್ ಕೆ.ಆರ್, ಸಹಾಯ ವಿಭಾಗದಲ್ಲಿ ಗೋಪಾಲಕೃಷ್ಣ ಕೆ.ಎಸ್, ಮುಷ್ಟಿ ಭಿಕ್ಷೆ ವಿಭಾಗದಲ್ಲಿ ರಾಮಚಂದ್ರ ಭಟ್ ಕಾನ, ಬಿಂದು ಸಿಂಧು ವಿಭಾಗದಲ್ಲಿ ಪ್ರಮೀಳ ಕಿರುಮಕ್ಕಿ ಅವರು ನೇಮಕಗೊಂಡಿದ್ದಾರೆ.