ಮಡಿಕೇರಿ, ಫೆ. ೭: ಸೇವಾ ಭಾರತಿ- ಸೇವಾಧಾಮ ಕೊಡಗು ವತಿಯಿಂದ ಮಡಿಕೇರಿಯ ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋದಕ ಆಸ್ಪತ್ರೆ ಶ್ರೀ ಕಾವೇರಿ ಕೃಪಾ ವಿಶ್ವ ಕಲ್ಯಾಣ ಸೇವಾ ಸಮಿತಿ ಅಶ್ವಿನಿ ಆಸ್ಪತ್ರೆ ಬೆನ್ನು ಹುರಿ (ಸ್ಪೆನಲ್ ಕಾರ್ಡ್) ಮಡಿಕೇರಿ, ಫೆ. ೭: ಸೇವಾ ಭಾರತಿ- ಸೇವಾಧಾಮ ಕೊಡಗು ವತಿಯಿಂದ ಮಡಿಕೇರಿಯ ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋದಕ ಆಸ್ಪತ್ರೆ ಶ್ರೀ ಕಾವೇರಿ ಕೃಪಾ ವಿಶ್ವ ಕಲ್ಯಾಣ ಸೇವಾ ಸಮಿತಿ ಅಶ್ವಿನಿ ಆಸ್ಪತ್ರೆ ಬೆನ್ನು ಹುರಿ (ಸ್ಪೆನಲ್ ಕಾರ್ಡ್) ಸಹಕಾರ ನೀಡಬೇಕೆಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾ ಭಾರತಿ ಖಜಾಂಚಿ, ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕರಾವ್ ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವವರು ಸರ್ಕಾರದ ಯೋಜನೆಗಳನ್ನು ಪಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೆ ನುರಿತ ತಜ್ಞ ವೈದ್ಯರ ಕೊರತೆಯಿಂದ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆ ಮೂಲಕ ಅರಿವು ಮೂಡಿಸಿ ಬೆನ್ನು ಹುರಿ ಅಪಘಾತಕ್ಕೆ ಒಳಗಾದವರಿಗೆ ಸ್ಥೆöÊರ್ಯ ತುಂಬಿ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಹೇಳಿದರು. ಬೆನ್ನುಹುರಿ ಸಮಸ್ಯೆಗೆ ವೈದ್ಯಕೀಯ ವಿಜ್ಞಾನದಲ್ಲಿ ಇದುವರೆಗೂ ಪರಿಹಾರ ಸಿಗದಿರುವ ಬಗ್ಗೆ ವಿಷಾದಿಸಿದರು.
ಅಶ್ವಿನಿ ಆಸ್ಪತ್ರೆ ಕಾರ್ಯದರ್ಶಿ ಕೆ.ಎಂ. ರಾಜಪ್ಪ ಮಾತನಾಡಿ, ಕೋವಿಡ್ ಸಂದರ್ಭ ಅಶ್ವಿನಿ ಆಸ್ಪತ್ರೆಯಲ್ಲಿ ಐದು ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಮುಂದಿನ ವರ್ಷ ಅಶ್ವಿನಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕಾಲೇಜು, ಫಾರ್ಮ ಕಾಲೇಜು ಮತ್ತಿತರ ಕೋರ್ಸ್ಗಳನ್ನು ಆರಂಭಿಸಲಾಗುತ್ತದೆ ಎಂದು ಮಾಹಿತಿಯಿತ್ತರು.
ಇದೇ ಸಂದರ್ಭ ಆರು ಮಂದಿಗೆ ಗಾಲಿ ಕುರ್ಚಿಗಳನ್ನು ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಕಾವೇರಿ ಕೃಪಾ ವಿಶ್ವ ಕಲ್ಯಾಣ ಸೇವಾ ಸಮಿತಿ ಟ್ರಸ್ಟಿ ಬಿ.ವಿ. ಮೋಹನ್ದಾಸ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ, ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಕೆ. ಮಂಜುನಾಥ್, ರಾಜಕೀಯ ವಿಶ್ಲೇಷಕರಾದ ರತನ್ ಶ್ರದ್ಧಾ, ವಿಕಾಸ್ ಜನ ಸೇವಾ ಟ್ರಸ್ಟ್ ಕಾರ್ಯದರ್ಶಿ ಪ್ರದೀಪ್ ಕರ್ಕೆರ ಉಪಸ್ಥಿತರಿದ್ದರು.
ಸೇವಾ ಭಾರತಿ ಹಿರಿಯ ವ್ಯವಸ್ಥಾಪಕರಾದ ಚರಣ್ಕುಮಾರ್ ನಿರೂಪಿಸಿ, ಕೆ.ಎಂ. ರಾಜಪ್ಪ ಸ್ವಾಗತಿಸಿ, ವಂದಿಸಿದರು. ತಾ.೮ ರಂದು (ಇಂದು) ಬೆನ್ನು ಹುರಿ ರೋಗಿಗಳ ಆರೋಗ್ಯ ತಪಾಸಣೆ, ತಾ. ೯ರಂದು (ನಾಳೆ) ಜಾಥಾ ನಡೆಯಲಿದೆ.