ಸೋಮವಾರಪೇಟೆ, ಫೆ. ೭: ಮೊದಲೇ ಪಾರ್ಕಿಂಗ್ ಸಮಸ್ಯೆಯಿಂದ ಕಿಷ್ಕಿಂಧೆಯAತಾಗಿರುವ ಸೋಮವಾರಪೇಟೆ ಪಟ್ಟಣದಲ್ಲಿನ ಸಂಚಾರ ನಿಯಮಗಳನ್ನು ಪೊಲೀಸ್ ಇಲಾಖೆ ಸಡಿಲಿಸಿರುವ ಪರಿಣಾಮ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ. ಏಕಮುಖ ಸಂಚಾರ, ಹೆಲ್ಮೆಟ್ ರಹಿತ ಚಾಲನೆ, ಎಲ್ಲೆಂದರಲ್ಲಿ ವಾಹನ ನಿಲುಗಡೆ, ತ್ರಿಬಲ್ ರೈಡಿಂಗ್ಗಳು ಮಾಮೂಲಾಗಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ.
ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ರಾಮಚಂದ್ರ ನಾಯಕ್ ಅವರು ವರ್ಗಾವಣೆಗೊಂಡಿದ್ದಾರೆ. ಇಲ್ಲಿಗೆ ನಿಯೋಜನೆಗೊಂಡಿದ್ದ ಮುದ್ದು ಮಹದೇವ ಅವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿಗಳನ್ನು ಚುನಾವಣೆ ಕಾರಣ ಬೇರೆಡೆಗೆ ವರ್ಗ ಮಾಡಲಾಗಿದೆ. ಇವೆಲ್ಲದರ ಪರಿಣಾಮ ಪಟ್ಟಣದಲ್ಲಿ ಸಂಚಾರ ನಿಯಮ ಅಂಕೆಯಿಲ್ಲದAತಾಗಿದೆ. ವಾರದ ಸಂತೆ ದಿನವಾದ ಸೋಮವಾರ ಪಟ್ಟಣದ ಕ್ಲಬ್ರಸ್ತೆ ಹಾಗೂ ಸಿ.ಕೆ. ಸುಬ್ಬಯ್ಯ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಮಾತ್ರ ಉಪಯೋಗಿಸಬೇಕಿದೆ. ಪಟ್ಟಣಕ್ಕೆ ಆಗಮಿಸುವ ವಾಹನಗಳು ಸಿ.ಕೆ. ಸುಬ್ಬಯ್ಯ ರಸ್ತೆಯ ಮೂಲಕ, ಪಟ್ಟಣದಿಂದ ಹೊರ ಹೋಗುವ ವಾಹನಗಳು ಕ್ಲಬ್ ರಸ್ತೆಯ ಮೂಲಕ ತೆರಳಬೇಕಿದೆ. ಇದಕ್ಕಾಗಿ ಪ.ಪಂ. ಎದುರು ಪೊಲೀಸ್ ಬ್ಯಾರಿಕೇಡ್ ಅಳವಡಿಸಿ, ಕೆಲವೊಮ್ಮೆ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳದವರನ್ನು ನಿಯೋಜಿಸಲಾಗಿರುತ್ತದೆ. ಆದರೆ ಕಳೆದ ಕೆಲ ಸಮಯದಿಂದ ಬ್ಯಾರಿಕೇಡ್ಗಳಿಲ್ಲ, ಸಿಬ್ಬಂದಿಗಳು ಮೊದಲೇ ಇಲ್ಲದಂತಾಗಿದೆ. ಪರಿಣಾಮ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆ, ಏಕಮುಖ ಸಂಚಾರವಿದ್ದರೂ ದ್ವಿಮುಖ ಸಂಚಾರ, ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್, ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೂ ಸಹ ಬೈಕ್ ಚಾಲನೆ ಮಾಡುತ್ತಿರುವುದು ಮಾಮೂಲಾಗಿದೆ. ಸೋಮವಾರದಂದು ಗ್ರಾಮೀಣ ಭಾಗದಿಂದ ಹೆಚ್ಚಿನ ಮಂದಿ ವ್ಯಾಪಾರ ವಹಿವಾಟು, ಕಚೇರಿ ಕೆಲಸ, ಆಸ್ಪತ್ರೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಪಟ್ಟಣಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆ ವಾಹನ ದಟ್ಟಣೆಯೂ ಹೆಚ್ಚಿರುತ್ತದೆ. ಅದಕ್ಕಾಗಿ ಕ್ಲಬ್ ರಸ್ತೆಯ ಒಂದು ಭಾಗದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿ, ಏಕಮುಖ ಸಂಚಾರ ನಿಯಮ ಅಳವಡಿಸಲಾಗಿದೆ. ಆದರೆ ಈ ನಿಯಮವನ್ನು ಹಲವಷ್ಟು ಚಾಲಕರು ಪಾಲಿಸದಿರುವುದು ಕಂಡುಬರುತ್ತಿದೆ.
ಪೊಲೀಸರು ಸ್ಥಳದಲ್ಲಿದ್ದರೆ ಮಾತ್ರ ಸಂಚಾರ ನಿಯಮ ಜಾರಿಯಲ್ಲಿರುತ್ತದೆ. ಪೊಲೀಸ ರಿಲ್ಲದಿದ್ದರೆ ಎಗ್ಗಿಲ್ಲದ ಸಂಚಾರ ಮಾಮೂಲಾಗಿದೆ. ಇದರಿಂದಾಗಿ ಮೊದಲೇ ಕಿಷ್ಕಿಂಧೆ ಯಂತಾಗಿರುವ ಪಟ್ಟಣ ಮತ್ತಷ್ಟು ಸಮ ಸ್ಯೆಗೆ ಒಳಗಾಗುತ್ತಿದೆ. ಸಂತೆ ದಿನವಾ ದರೂ ಪೊಲೀಸರು ವಾಹನಗಳ ಸುಗಮ ಸಂಚಾರ, ನಿಲುಗಡೆ ವ್ಯವಸ್ಥೆಗಳ ಬಗ್ಗೆ ನಿಗಾವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.